ಅನಿವಾಸಿಗಳ ಬೇಡಿಕೆ ಈಡೇರಿಸಲು ಕೋರಿಕೆ

ಶ್ರೀ. ಬಿ.ಎಸ್. ಯಡಿಯುರಪ್ಪ
ಮುಖ್ಯಮಂತ್ರಿಗಳು ಹಾಗು ಅಧ್ಯಕ್ಷರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ
ಕರ್ನಾಟಕ ಸರ್ಕಾರ
ವಿಷಯ: ಅನಿವಾಸಿ ಕನ್ನಡಿಗರ ಕಾಳಜಿಗಾಗಿ ಮನವಿ
ಗೌರವಾನ್ವಿತ ಮುಖ್ಯಮಂತ್ರಿಗಳೇ,
ಅನಿವಾಸಿ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ತಮ್ಮಿಂದಲೇ ಸ್ಥಾಪಿಸಲ್ಪಟ್ಟ “ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ”ಗೆ ನೇರ ಉಸ್ತುವಾರಿಗಳನ್ನು ನೇಮಿಸದೆ, ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಕ್ಕೆ ಗುರಿಮಾಡಿದಂತಹಾ ಸ್ಥಿತಿ ತಮ್ಮ ಗಮನಕ್ಕೆ ಈಗಾಗಲೇ ಬಂದಿದೆ ಎಂದು ಭಾವಿಸುತ್ತೇವೆ.
ಈ ಕುರಿತು ನಮ್ಮ ಈ ಕೆಳಕಂಡ ಮನವಿಗಳನ್ನು ಪರಿಗಣಿಸಲು ಕೋರುತ್ತಿದ್ದೇವೆ.
ನಾಲ್ಕು ಪ್ರಮುಖ ಬೇಡಿಕೆಗಳೊಂದಿಗೆ ಇಂದು 30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರ ಟ್ವಿಟರ್ ಅಭಿಯಾನ!
1) ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಗೆ ಉಪಾಧ್ಯಕ್ಷರನ್ನ ಕೂಡಲೇ ನೇಮಿಸಬೇಕು
2) ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು.
3) ನೆನೆಗುದಿಗೆ ಬಿದ್ದಿರುವ ಎನ್.ಆರ್.ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸುವುದು.
4) ಹೆಚ್ಚು ಅನಿವಾಸಿ ಕನ್ನಡಿಗರ ಸಾಂದ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು.
✍️ಇಂತೀ
ಆಡಳಿತ ಮಂಡಳಿ ಮತ್ತು ಸಮಿತಿ ಸದಸ್ಯರು
ಸುದೀಪ್ ದಾವಣಗೆರೆ/ಅಧ್ಯಕ್ಷರು
ಮಮತಾ ಮೈಸೂರು / ಉಪಾಧ್ಯಕ್ಷರು
ಸೆಂತಿಲ್ ಬೆಂಗಳೂರು/ಪ್ರದಾನ ಕಾರ್ಯದರ್ಶಿ
ರಫೀಕಲಿ ಕೊಡಗು / ಮುಖ್ಯ ಸಂಚಾಲಕರು
ಹೆಮ್ಮೆಯ ಯುಎಇ ಕನ್ನಡಿಗರು
ದುಬೈ – ಸಂಯುಕ್ತ ಅರಬ್ ಸಂಸ್ಥಾನ

Comment here

This site uses Akismet to reduce spam. Learn how your comment data is processed.

Next Post

ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ

Wed Feb 10 , 2021
  ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ ಅಬುಧಾಬಿ : 10.02.2021 ಸೌದಿ ಅರೇಬಿಯಾ ಮತ್ತು ಕುವೈತ್  ಅನಿವಾಸಿ ಕನ್ನಡಿಗರು ದುಬೈನಲ್ಲಿ  ತುರ್ತು ಪರಿಸ್ಥಿತಿಯಲ್ಲಿದ್ದು ಅವರ ಸಹಾಯಕ್ಕೆ ಕರ್ನಾಟಕ  ಸರ್ಕಾರ ಮುಂದೆ ಬರಬೇಕು  & ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಕೋರಿ ನಾಳೆ ದುಬೈ ಹೆಮ್ಮೆಯ ಕನ್ನಡಿಗರು,ಯುಎಇ ಇದರ ವತಿಯಿಂದ ನಾಳೆ 11.02.2021ರಂದು ಭಾರತೀಯ ಕಾಲಮಾನ  ಸಂಜೆ 5ಕ್ಕೆ ಟ್ವಿಟ್ಟರ್ ಅಭಿಯಾನ ನಡೆಯಲಿದೆ. ತಮಗೆ ತಿಳಿದಂತೆ […]