ಕನ್ನಡನಾಡು

ಕನ್ನಡನಾಡು

ಕನ್ನಡ ನಾಡಿನಲಿ ನುಡಿಯು ನೀನಾಗು
ನನ್ನ ಮನದಲ್ಲೇ ಕಾಡುವ ನಾಡಾಗು
ಹಸಿರ ವನಗಳ ನೋಡುತಲಿ
ಉಸಿರ ಕಂಗಳ ಜೊತೆಯಲ್ಲಿ

ಸೊಬಗಿನ ತಾಣದಲಿ ಕಳೆಯುತ ಬಾಳುವ ನೀ
ಪೃಕ್ರತಿಯ ಮಡಿಲನ್ನು ಸವಿಯುತ ಹೇಳುವೆ ನಾ
ಕನ್ನಡ ಪದಗಳ ಒಲವಿನ ನೋಟ
ಕಲ್ಪನೆ ಸಾಲುಗಳ ಹೃದಯ ಕೂಟ

ನೆನಪಲಿ ಉಳಿದಿದೆ ಈ ನಾಡು
ಕನಸಲಿ ಕಾಡಿದ ಕರುನಾಡು
ಬಿಸಿಲ ನಾಡು,ಮಳೆಯಕಾಡು
ಎಲ್ಲವು ಕೂಡಿದ ಶ್ರೇಷ್ಠ ಹಾಡು*

ಅರಸರ ನಾಡು ದಾಸರ ಬೀಡು
ಕವಿಗಳ ಒಲವಿನ ಕನ್ನಡನಾಡು
ಸಾವಿರ ಸಾವಿರ ವರುಷಗಳು
ಇತಿಹಾಸ ವೆಲ್ಲ ಹರ್ಷ ಗಳು

ಬನ್ನಿ ಬನ್ನಿರಿ ನೀವೆಲ್ಲ
ಸಾರುವ ಜಗಕೆ ಕನ್ನಡ ಭಾಷೆ
ತಿಳಿಸುವ ಜನರಿಗೆ ಕರುನಾಡ ಮಹತ್ವ
ಜಗವೆಲ್ಲ ಹರಡಲಿ ಕನ್ನಡ ಕನ್ನಡ

ಅಬ್ದುಲ್ ರಶೀದ್ ಅಹಮದ್
ಕೊಡಗು
rasheed766@gmail.con

Comment here

This site uses Akismet to reduce spam. Learn how your comment data is processed.

Next Post

30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರಿಂದ ಜನವರಿ 2ರಂದು 'ಎನ್ಆರೈ ಅಪೀಲ್ ಡೇ' ಅಭಿಯಾನ!

Sat Dec 19 , 2020
ತಮಗಿರುವ ಸಮಸ್ಯೆಗಳ ಬಗ್ಗೆ, ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಮಧ್ಯಾಹ್ನ ಭಾರತೀಯ ಕಾಲಮಾನ ಸಂಜೆ 4ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.   ತಮ್ಮ ಕುಟುಂಬದ […]