ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ

ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ
ಬದುಕುವ ಕನ್ನಡವಾಗಿ ಹೋದಲ್ಲೆಲ್ಲ

ಯಾವ ನೆಲದ ಪರಿಮಿತಿ ಇಲ್ಲ ನಮಗೆ
ಕನ್ನಡಮ್ಮನ ಮುಡಿಗೆ ಮುಡಿಸುವ ಅಭಿಮಾನದ ಮಲ್ಲಿಗೆ

ತನು ಕನ್ನಡ ಮನ ಕನ್ನಡ ನುಡಿ ಕನ್ನಡ ನಮಗೆ,
ಮರುಳಾಗದವರಿಲ್ಲ ಕನ್ನಡ ಭಾಷೆಯ ಸೊಗಡಿಗೆ

ನಾವು ಸವಿದ ಈ ಸೊಗಸಿನ ಸವಿ ಪಾಕಕೆ
ಕಾದಿರಿಸಬೇಕಿದೆ ಮುಂದಿನ ನವ ಪೀಳಿಗೆಗೆ
ಕನ್ನಡ ಬಳಸಿ ಬೆಳಸಿ ಉಳಿಸಬೇಕಾಗಿದೆ ಮುಂದಕೆ

ಬಂದಿದೆ ನಮ್ಮ ರಾಜ್ಯೋತ್ಸವ ನಮ್ಮೊಂದಿಗೆ ಇಲ್ಲಿಗೆ
ಪ್ರತಿದಿನವೂ ಆಚರಿಸೋಣ ಕನ್ನಡದ ಹಬ್ಬ ಸಂಭ್ರಮಕೆ

ಕವಿಯ ವಾಣಿ ಯಂತೆ ಆಗಬೇಕಿದೆ ವಿಶ್ವಮಾನವ
ತೀರಿಸಬೇಕಿದೆ ಆ ತಾಯಿಯ ಜನ್ಮ ಜನ್ಮದ ಋಣವ

ಜೈ ಕನ್ನಡ
ಜೈ ಕನ್ನಡಾಂಬೆ
🙏🙏

  • ಮಮತಾ ರಾಘವೇಂದ್ರ, ಮೈಸೂರು.

Comment here

This site uses Akismet to reduce spam. Learn how your comment data is processed.

Next Post

ಕನ್ನಡನಾಡು

Fri Dec 18 , 2020
ಕನ್ನಡನಾಡು ಕನ್ನಡ ನಾಡಿನಲಿ ನುಡಿಯು ನೀನಾಗು ನನ್ನ ಮನದಲ್ಲೇ ಕಾಡುವ ನಾಡಾಗು ಹಸಿರ ವನಗಳ ನೋಡುತಲಿ ಉಸಿರ ಕಂಗಳ ಜೊತೆಯಲ್ಲಿ ಸೊಬಗಿನ ತಾಣದಲಿ ಕಳೆಯುತ ಬಾಳುವ ನೀ ಪೃಕ್ರತಿಯ ಮಡಿಲನ್ನು ಸವಿಯುತ ಹೇಳುವೆ ನಾ ಕನ್ನಡ ಪದಗಳ ಒಲವಿನ ನೋಟ ಕಲ್ಪನೆ ಸಾಲುಗಳ ಹೃದಯ ಕೂಟ ನೆನಪಲಿ ಉಳಿದಿದೆ ಈ ನಾಡು ಕನಸಲಿ ಕಾಡಿದ ಕರುನಾಡು ಬಿಸಿಲ ನಾಡು,ಮಳೆಯಕಾಡು ಎಲ್ಲವು ಕೂಡಿದ ಶ್ರೇಷ್ಠ ಹಾಡು* ಅರಸರ ನಾಡು ದಾಸರ ಬೀಡು […]