ಕೆಎನ್ಆರೈ ಪೋರಂ ಉಪಾಧ್ಯಕ್ಷರ ನೇಮಕಕ್ಕೆ ಆಗ್ರಹ

ಕೆಎನ್ಆರೈ ಪೋರಂ ಉಪಾಧ್ಯಕ್ಷರ ನೇಮಕಕ್ಕೆ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಜನವರಿ ೨ರಂದು ಅನಿವಾಸಿ ಕನ್ನಡಿಗರ ಅಪೀಲ್ ಡೇ ಭಾಗವಾದ ಟ್ವಿಟ್ಟರ್ ಮತ್ತು ಇಮೇಲ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೆಮ್ಮೆಯ ಯುಎಇ ಕನ್ನಡಿಗರು ಗ್ರೂಪಿನಲ್ಲಿರುವ ಸರ್ವ ಸದಸ್ಯರಲ್ಲಿ ವಿನಂತಿ.
ಇಮೇಲ್ / ಟ್ವಿಟ್ಟರ್ ಹ್ಯಾಶ್ಟ್ಯಾಗ್
ಕೊರೋನ ಸಮಯದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಾಗ ಯುಏಯಿಂದ ತಾಯಿನಾಡಿಗೆ ಮರಳಲು ಸಾಧ್ಯವಾಗದೆ ಸಿಲುಕಿಕೊಂಡಿದ್ದ ರೋಗಿಗಳು, ಗರ್ಬಿಣಿಯರು, ಮಕ್ಕಳು, ವೃದ್ದರು ಸೇರಿದಂತೆ ಹಲವು ಮಂದಿ ಅನಿವಾಸಿ ಕನ್ನಡಿಗರು ಸಂಕಷ್ಟ ಎದುರಿಸುತ್ತಿದ್ದಾಗ ವಿಮಾನ ಸೇವೆ ಕೋರಿ ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ನಮ್ಮ ಹೆಮ್ಮೆಯ ಯುಎಇ ಕನ್ನಡಿಗರು ತಂಡ ನಡೆಸಿದ ಟ್ವಿಟ್ಟರ್ ಅಭಿಯಾನಕ್ಕೆ ನೀವು ನೀಡಿದ ಬೆಂಬಲದ ಹಾಗೆ ಈ ಅನಿವಾಸಿ ಅಪೀಲ್ ಡೇ ಅಭಿಯಾನಕ್ಕೂ ಸಹ ಬೆಂಬಲ ನೀಡಬೇಕಾಗಿ ಕೋರಿಕೊಳ್ಳುತ್ತೇವೆ.
ಕೆಎನ್ಆರೈ ಪೋರಂ ಎಂದರೇನು?
ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರಕಾರದಲ್ಲಿ ಅನಿವಾಸಿ ಭಾರತೀಯ ಸಮಿತಿ ಇದೆ(ಕೆಎನ್ಆರೈ ಪೋರಂ), ಅನಿವಾಸಿ ಕನ್ನಡಿಗರ
ಸಂಕಷ್ಟಗಳನ್ನು ಹೇಳಿಕೊಳ್ಳಲು, ವಿದೇಶದಲ್ಲಿ ಕನ್ನಡ ಸಾಹಿತ್ಯ ಸಂಸ್ಕ್ರತಿ ಭಾಷೆ ಬೆಳೆಸಲು ಮತ್ತು ಸಾಗರದಾಚೆ ಕನ್ನಡ ಕಂಪನ್ನು ಪಸರಿಸಲು ಇರುವ ಒಂದು ವೇದಿಕೆ, ಇದು ಕರ್ನಾಟಕ ಸರ್ಕಾರದ ಅಧಿಕೃತ ವೇದಿಕೆಯಾಗಿದ್ದು ಇದರ ಅಧ್ಯಕ್ಷರಾಗಿ ಸ್ವತಃ ಮುಖ್ಯಮಂತ್ರಿಗಳು ಇರುತ್ತಾರೆ.
ಉಪಾಧ್ಯಕ್ಷ ಸ್ಥಾನ ಯಾಕೆ ಮತ್ತು ಯಾರಿಗೆ ಕೊಡಬೇಕು ?
ಕೆಎನ್ಆರೈ ಪೋರಂ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿಗಳು, ಆದರೆ ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಕೆಎನ್ಆರೈ ಸಮಿತಿಯಲ್ಲಿ ಉಪಾಧ್ಯಕ್ಷರಿಗೇ ಹೆಚ್ಚಿನ ಜವಾಬ್ದಾರಿ. ಆದರೆ ಕಳೆದ ಮೂರು ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನು ನೇಮಕವೇ ಮಾಡಿಲ್ಲ, ಹಲವಾರು ಕನ್ನಡಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ ಯಾರು ಸ್ಪಂದಿಸುವ ಗೋಜಿಗೆ ಹೋಗಿರಲಿಲ್ಲ, ಇದೀಗ ಶತಾಯಗತಾಯ ಬೇಡಿಕೆಯನ್ನು ಕರ್ನಾಟಕ ಸರಕಾರಕ್ಕೆ ತಲುಪಿಸಿ ನಮ್ಮ ಬೇಡಿಕೆಯನ್ನುಈಡೇರಿಸಿ ಕೊಳ್ಳಬೇಕೆಂದು ಅನಿವಾಸಿ ಕನ್ನಡಿಗರು ತೀರ್ಮಾನಿಸಿದೆ, ಹಾಗಾಗಿ ಈ ವಿಭಿನ್ನ ಅಭಿಯಾನದ ಮೂಲಕ ನಮಗೆಲ್ಲಾ ಒಗ್ಗಟ್ಟಾಗಿ ಧ್ವನಿಗೂಡಿಸುವ, ಉಪಾಧ್ಯಕ್ಷ ಸ್ಥಾನವನ್ನು ಅನಿವಾಸಿ ಕನ್ನಡಿಗನಿಗೆ/ಕನ್ನಡತಿಗೆ ಕೊಡಬೇಕು ಎಂದು ಸಹ ನಮ್ಮ ಕೋರಿಕೆ ಇದೆ, ಕಾರಣ ಅನಿವಾಸಿಗಳಿಗೆ ಮಾತ್ರ ಅನಿವಾಸಿಗಳ ಸಂಕಷ್ಟ ಅರ್ಥವಾಗುದು ಮತ್ತು ಸುಲಭ ರೀತಿಯಲ್ಲಿ ಜನರ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ.
ನಿಮಗೆ ಗೊತ್ತಿರುವ ಹಾಗೆ ಎಲ್ಲಾ ರಾಜ್ಯಗಳ ಅನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಲು ಎಲ್ಲಾ ರಾಜ್ಯಗಳು ತಮ್ಮದೇ ಆದ ಸರ್ಕಾರಗಳ ಸಂಸ್ಥೆಯನ್ನು ಮತ್ತು ಪ್ರತಿನಿಧಿಗಳನ್ನು ಹೊಂದಿದ್ದು ಅನಿನಾಸಿಗಳ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಬೇಕಾದ ಸಹಾಯ ಸಹಕಾರ ಕಾರ್ಯವನ್ನು ಮಾಡುತ್ತಾರೆ , ಆದರೆ ಕರ್ನಾಟಕದ ಅನಿವಾಸಿಗಳ ವಿಷಯಯದಲ್ಲಿ ನಮ್ಮ ಗೋಳನ್ನು ಸಂಕಷ್ಟಗಳನ್ನು ಕೇಳುವ ರಾಜ್ಯ ಸರ್ಕಾರದ ಯಾವುದೇ ವೇದಿಕೆ ಇಲ್ಲದ್ದಾಗಿದ್ದು ಇರುವ ಕೆಎನ್ಆರೈ ಪೋರಂ ಸಾರಥಿ ಇಲ್ಲದೆ ಮೂಲೆಗುಂಪಾಗಿದೆ, ಕೊರೋನಾ ಸಮಯದಲ್ಲಿ ನಾವು ಅನಿವಾಸಿ ಕನ್ನಡಿಗರು ಎಷ್ಟು ಸಮಸ್ಯೆ ಎದುರಿಸಿದ್ದೇವೆ ಎಂದು ಕಣ್ಣಾರೆ ನೋಡಿದವರು ನೀವೆಲ್ಲಾ, ವಿಮಾನ ಸೇವೆಯನ್ನು ಮಿತಿಗೊಳಿಸಿದಾಗ ಬೇರೆ ರಾಜ್ಯಗಳಿಗೆ ರಾಜ್ಯ ಸರಕಾರದ ಮೂಲಕ ಅವರವರ ರಾಜ್ಯದವರು ಭಾರತ ತಲುಪಿದಾಗ ಅನಿವಾಸಿ ಕನ್ನಡಿಗರು ಮಾತ್ರ ಆಕಾಶ ನೋಡಿ ಕೂರಬೇಕಾಯಿತು ಕಾರಣ ಕನ್ನಡಿಗರ ಗೋಳು ಕೇಳುವ ಹಡಗಿಗೆ ನಾವಿಕ ಇರಲಿಲ್ಲ, ಕೊರೋನಾ ಮಹಾಮಾರಿ ಸಮಯದಲ್ಲಿ ವಾಸಿಸಲು ಮನೆ ಇಲ್ಲದೆ, ಕೆಲಸ ಕಳೆದುಕೊಂಡ ಹಲವು ಕನ್ನಡಿಗರು ಒಂದೊತ್ತಿನ ಊಟಕ್ಕೆ ಸಹ ಬಹಳ ಕಷ್ಟ ಪಟ್ಟಿದ್ದನ್ನು ನಮ್ಮ ತಂಡ ಸೇರಿ ಹಲವು ಅನಿವಾಸಿ ಸಂಘಟನೆಗಳು ಕಣ್ಣಾರೆ ನೋಡಿದ್ದು ಈಗಲೂ ಕಣ್ಣ ಮುಂದೆ ಹಾಗೆ ಉಳಿದಿದೆ.
ಸತತ ಕೋರಿಕೆ, ಹಲವಾರು ಮನವಿಗಳ ನಂತರವೂ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟು, ಸ್ಪಂದನೆ ಸಿಗದೇ ಹೋದರೆ ಗಮನ ಸೆಳೆಯ ಬೇಕಾದರೆ ವಿಭಿನ್ನ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ ಅಂತದ್ದೇ ಒಂದು ಪ್ರಯತ್ನಕ್ಕೆ ವಿಶ್ವದಾದ್ಯಂತ ಇರುವಂತಹ ಅನಿವಾಸಿ ಕನ್ನಡಿಗರು ಕೈಹಾಕಿದ್ದಾರೆ, ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಅಂತರಾಷ್ಟ್ರೀಯ ಕನ್ನಡಿಗರ ಒಕ್ಕೂಟ ವೇದಿಕೆ ಮೂಲಕ ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅಭಿಯಾನವನ್ನು ಜನವರಿ 2 ರಂದು ಭಾರತೀಯ ಕಾಲಮಾನ ಸಂಜೆ 4ಕ್ಕೆ ನಡೆಸಲು ತೀರ್ಮಾನಿಸಿದ್ದಾರೆ. ‘ಎನ್ಆರೈ ಅಪೀಲ್ ಡೇ’ ಎಂಬ ಹ್ಯಾಷ್’ಟ್ಯಾಗ್ ನೊಂದಿಗೆ ಜನವರಿ 2ರಂದು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ಮುಂದಾಗಿದ್ದಾರೆ.
ಈ ಒಂದು ಅಭಿಯಾನದಲ್ಲಿ ನಮ್ಮ ಹೆಮ್ಮೆಯ ಯುಎಇ ಕನ್ನಡಿಗರು ಗ್ರೂಪಿನಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಕೈ ಜೋಡಿಸಿ ನಮ್ಮೆಲ್ಲರ ಸಂಕಷ್ಟ ಹೇಳಿಕೊಳ್ಳಲು ಇರುವ ಕೆಎನ್ಆರೈ ಫೋರಮ್ಗೆ ಸಾರಥಿ ನೇಮಿಸಲು ಸರ್ಕಾರವನ್ನು ಕೋರುವ, ಹಾಗೆ ಮುಂದಿನ ದಿನಗಳಲ್ಲಿ ಬಹರೈನಿನಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ಎಚ್ ಡಿ ದೇವೇಗೌಡ ಅವರು ಶಂಕುಸ್ಥಾಪನೆ ಮಾಡಿದ ಬಹರೈನ್ ಕನ್ನಡ ಭವನದ ಹಾಗೆ ದುಬೈ ಮಹಾನಗರಿ ಸೇರಿದಂತೆ ಹೆಚ್ಚಿನ ಕನ್ನಡಿಗರ ಸಾಂದ್ರತೆ ಇರುವ ಕಡೆಗಳಲ್ಲಿ ಕನ್ನಡ ಭವನ ಸ್ಥಾಪಿಸಲು ಮತ್ತು ಇತರ ಹಲವು ರೀತಿಯ ಅನಿವಾಸಿಗಳ ಬೇಡಿಕೆಯನ್ನು ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ ಅದಕ್ಕೆ ನಮ್ಮಗೆ ಒಂದು ವೇದಿಕೆ ಮತ್ತು ಪ್ರತಿನಿಧಿಗಾಗಿ ನಮ್ಮ ಈ ಅಭಿಯಾನ ಒಂದು ಪ್ರಾರಂಭಿಕ ಹಂತ.
✍️ಆಡಳಿತ ಮಂಡಳಿ ಮತ್ತು ಸಮಿತಿ ಸದಸ್ಯರು
ಸುದೀಪ್ ದಾವಣಗೆರೆ/ಅಧ್ಯಕ್ಷರು
ಮಮತಾ ಮೈಸೂರು / ಉಪಾಧ್ಯಕ್ಷರು
ಸೆಂತಿಲ್ ಬೆಂಗಳೂರು/ಪ್ರದಾನ ಕಾರ್ಯದರ್ಶಿ
ರಫೀಕಲಿ ಕೊಡಗು / ಮುಖ್ಯ ಸಂಚಾಲಕರು
ಹೆಮ್ಮೆಯ ಯುಎಇ ಕನ್ನಡಿಗರು
ದುಬೈ – ಸಂಯುಕ್ತ ಅರಬ್ ಸಂಸ್ಥಾನ
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು

Comment here

This site uses Akismet to reduce spam. Learn how your comment data is processed.

Next Post

ಅನಿವಾಸಿಗಳ ಬೇಡಿಕೆ ಈಡೇರಿಸಲು ಕೋರಿಕೆ

Mon Jan 4 , 2021
ಶ್ರೀ. ಬಿ.ಎಸ್. ಯಡಿಯುರಪ್ಪ ಮುಖ್ಯಮಂತ್ರಿಗಳು ಹಾಗು ಅಧ್ಯಕ್ಷರು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರ ವಿಷಯ: ಅನಿವಾಸಿ ಕನ್ನಡಿಗರ ಕಾಳಜಿಗಾಗಿ ಮನವಿ ಗೌರವಾನ್ವಿತ ಮುಖ್ಯಮಂತ್ರಿಗಳೇ, ಅನಿವಾಸಿ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ತಮ್ಮಿಂದಲೇ ಸ್ಥಾಪಿಸಲ್ಪಟ್ಟ “ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ”ಗೆ ನೇರ ಉಸ್ತುವಾರಿಗಳನ್ನು ನೇಮಿಸದೆ, ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಕ್ಕೆ ಗುರಿಮಾಡಿದಂತಹಾ ಸ್ಥಿತಿ ತಮ್ಮ ಗಮನಕ್ಕೆ ಈಗಾಗಲೇ ಬಂದಿದೆ ಎಂದು ಭಾವಿಸುತ್ತೇವೆ. ಈ ಕುರಿತು ನಮ್ಮ ಈ ಕೆಳಕಂಡ ಮನವಿಗಳನ್ನು ಪರಿಗಣಿಸಲು ಕೋರುತ್ತಿದ್ದೇವೆ. […]