*ಗಲ್ಫ್ ದೇಶದ ಕನ್ನಡ ಚಟುವಟಿಕೆ*

ಗಲ್ಫ್ ದೇಶದ ಕನ್ನಡ ಚಟುವಟಿಕೆ


ಕನ್ನಡ ಮಾತೆಯ ಹಿರಿಮೆಯ ಮಕ್ಕಳು ನಾವು
ಗಲ್ಫಿನ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನಮ್ಮ ನೆರವು……
ಹೆಮ್ಮೆಯ ಯುಎಇ ಕನ್ನಡಿಗರಿಗಿದೆ ಕನ್ನಡಿಗರ ಅರಿವು
ಧೈರ್ಯ ತುಂಬಿ ಅಳಿಸುವೆವು ಅವರ ನೋವು…….

ನಿಜಕ್ಕೂ ನಮಗೆ ಹೆಮ್ಮೆಯಿದೆ ನಿಮ್ಮ ಮೇಲೆ
ಗಲ್ಫ್ ರಾಷ್ಟ್ರದಲ್ಲಿ ಬೆಳೆಸುತ್ತಿದ್ದೀರಿ ಕನ್ನಡ ಸಾಹಿತ್ಯ- ಕಲೆ……
ಆಳವಾದ ಮರುಭೂಮಿಯ ಮಡಿಲಲ್ಲಿ ಕರ್ನಾಟಕದ ಸಂಸ್ಕೃತಿ
ಕನ್ನಡದ ಚಟುವಟಿಕೆ ಇಲ್ಲಿ ಕಂಡಾಗ ನೆನಪಾಗುವುದು ನಮ್ಮ ಪ್ರಕೃತಿ……

ಕರ್ನಾಟಕದ ನಾಡ ಹಬ್ಬ ಮೈಸೂರು ದಸರಾ
ಒಟ್ಟುಗೂಡುತ್ತಿದ್ದೆವು ಕ್ರೀಡೆಗಾಗಿ ಪರಸ್ಪರ….
ಹಗಲು-ರಾತ್ರಿ ದುಡಿಯುತ್ತಿದ್ದೀರಿ ನೀವು ಕನ್ನಡಿಗರಿಗಾಗಿ
ಹೆಮ್ಮೆಯ ಯುಎಇ ಕನ್ನಡಿಗ ಮಿತ್ರರೆ ನಮ್ಮೆಲ್ಲರ ಬೆಂಬಲವಿದೆ ಮುಂದೆ ಸಾಗಿ……
ನಮ್ಮೆಲ್ಲರ ಬೆಂಬಲವಿದೆ ಮುಂದೆ ಸಾಗಿ……

ರಚನೆ

ಶೇಕ್ ಮಹಮ್ಮದ್ ಸ್ವಾಲಿಹ್ ಬಿನ್ ಅಬ್ದುಲ್ ರಹಿಮಾನ್
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮ…
ವಯಸ್ಸು : ೨೨ ( ಇಪ್ಪತ್ತೆರಡು )
ಯುಎಇ ವಿಳಾಸ : ಬರ್ ದುಬೈ
ಕೆಲಸ : ಪ್ರೊಜೆಕ್ಟ್ ಕೋ
ಆರ್ಡಿನೇಟರ್ ಆಗಿ ಕಳೆದ ೭ ತಿಂಗಳಿನಿಂದ ಕೋಸ್ಟಲ್ ಟ್ರೇಡಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಜಿಲ್ಲಾ, ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದ
ಅನೇಕ ಕನ್ನಡ ಸಾಹಿತ್ಯ ಚಟುವಟಿಕೆ , ಭಾಷಣ , ಚರ್ಚಾ ಸ್ಪರ್ಧೆ ,
ನೀರೂಪಣೆ , ಕನ್ನಡ ಹಾಡು ಮೊದಲಾದವುಗಳಲ್ಲಿ ಭಾಗವಹಿಸಿ ದ್ದೇನೆ.

Comment here

This site uses Akismet to reduce spam. Learn how your comment data is processed.

Next Post

*ಯು ಎ ಇ ರಾಷ್ಟ್ರೀಯ ದಿನ

Wed Dec 2 , 2020
*ಯು ಎ ಇ ರಾಷ್ಟ್ರೀಯ ದಿನ ಧರೆಯೊಳು ಅನುಪಮ ಸುಂದರ ನೆಲೆಯು ಸಂಯುಕ್ತ ಅರಬ್ ರಾಷ್ಟ್ರವು ಖೊಲ್ಲಿಯ ಈ ರಾಷ್ಟ್ರವು ಮರಳುಗಾಡಿನೊಳ್ ಸೃಷ್ಟಿಸಿ ಸುರಪುರಿ ಮೆರೆದ ಶೇಖರು ಯು ಎ ಇ ಸಾರ್ವಭೌಮರು||…,,,, ಶೇಖ್ ಝಾಯೇದರ ಕನಸಿನ ಕೂಸು ಶೇಖ ರಷೀದರ ಸುಂದರ ಕನಸು ಪ್ರತಿ ಪ್ರಜೆಗಳ ಈ ಭವ್ಯದ ನನಸು ಯು ಎ ಇ ನಿರ್ಮಾಣವು ಸ್ವಾತಂತ್ರ್ಯದ ಹರ್ಷವು||…. ಏಳು ಬಣ್ಣಗಳ ಕಾಮನ ಬಿಲ್ಲಂತೆ ಸಪ್ತ ರಾಜ್ಯಗಳ ಅವಿಭಾಜ್ಯ […]