ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ

ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ

ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಇದರ ವತಿಯಿಂದ 2ನೇ ವರ್ಷದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ
ಅಬುಧಾಬಿ : 23.02.2021

ಹೆಮ್ಮೆಯ ಯುಎಇ ಕನ್ನಡಿಗರು ತಂಡದವರು ಆನ್ ಲೈನ್ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ – 2021 ನ್ನು ಇದೆ ತಿಂಗಳ ದಿನಾಂಕ 26ರಂದು ಸಂಜೆ 5 ಗಂಟೆಗೆ ಆಯೋಜಿಸಿಕೊಂಡಿದ್ದಾರೆ.

ಕನ್ನಡ ನಾಡಿನಿಂದ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಯುಎಗೆ ಕೆಲಸ ಅರಸಿ ಸಂದರ್ಶನ ವೀಸಾದಲ್ಲಿ ಬಂದ ಕನ್ನಡಿಗರಿಗೂ ಮತ್ತು ಇಲ್ಲೇ ಕೆಲಸದಲ್ಲಿ ಇದ್ದು ಇರುವ ಕೆಲಸ ಬದಲಾವಣೆ ಮಾಡಿ ಬೇರೊಂದು ಒಳ್ಳೆಯ ಕಂಪನಿಯಲ್ಲಿ ಸೇರಿಕೂಳ್ಳಲು ನೋಡುತ್ತಿರುವ ಅನಿವಾಸಿ ಕನ್ನಡಿಗರಿಗಾಗಿ ಇಂಟರ್ವ್ಯೂ ಅಟೆಂಡ್ ಮಾಡುವ ಬಗ್ಗೆ ಮಾಹಿತಿ, ಯಾವ ರೀತಿಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಕೆಲಸ ಹುಡುಕಬೇಕು, ಸಿ ವಿ ಹೇಗೆ ಇರಬೇಕು ಮುಂತಾದುವುಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಲು ನುರಿತ ತಜ್ಞ ಮಾರ್ಗದರ್ಶಕರಿಂದ ಗೈಡೆನ್ಸ್ ಕ್ಲಾಸ್ ಮತ್ತು ಕೆಲಸ ಹುಡುಕುತ್ತಿರುವ ಕನ್ನಡಿಗರನ್ನು ಕೆಲವು ಕಂಪನಿಗಳ ಮುಖ್ಯಸ್ಥರು ಬಂದು ಕೆಲಸಕ್ಕೆ ನೇಮಕಾತಿ ಪ್ರಕ್ರಿಯೆಯ ಉದ್ಯೋಗ ಮೇಳ ಮುಂತಾದ ವಿಷಯಗಳಿಗೆ ಉಚಿತವಾಗಿ ವೇದಿಕೆ ಒದಗಿಸಿದ್ದು ಕೆಲಸ ಹುಡುಕುತ್ತಿರುವ ಕನ್ನಡಿಗರು ಬಂದು ಸದುಪಯೋಗ ಪಡೆದುಕೊಳ್ಳಬೇಕಾಗಿ ತಂಡದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು , ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿಗಳಾದ ಸೆಂಥಿಲ್ ಬೆಂಗಳೂರು, ಹಾಗು ಪ್ರಧಾನ ಸಂಚಾಲಕರಾದ ರಫೀಕಲಿ ಕೊಡಗು ವಿನಂತಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ ಶ್ರೀಯುತ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರು ಮೋಟಿವೇಷನಲ್ ಮಾತುಗಾರರು ಆದ ಶ್ರೀಯುತ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀಮತಿ ರಾಧಾ ಜೀವನ್ ಅವರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮ್ಯ ಕನ್ನಡಿಗರು ತಂಡದ ಜಾಬ್ ವಿಭಾಗದ ಸಂಚಾಲಕರಾದ ಶ್ರೀಯುತ ನವೀನ್ ಅವರು ನೆರವಹಿಸಲಿದ್ದಾರೆ.

ಕಾರ್ಯಕ್ರಮದ ಆಹ್ವಾನಕ್ಕಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರಮುಖ ಸಮಿತಿ ಸದಸ್ಯರುಗಳಾದ ಶ್ರೀಮತಿ ಮಮತಾ ಶಾರ್ಜಾ , ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು , ಶ್ರೀಮತಿ ಹಾದಿಯ ಮಂಡ್ಯ, ಶ್ರೀಮತಿ ಪಲ್ಲವಿ ದಾವಣಗೆರೆ, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ,ಶ್ರೀಮತಿ ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ  : ದುಬೈ ವಾರ್ತೆಗಳು ನ್ಯೂಸ್ ಡೆಸ್ಕ್

Comment here

This site uses Akismet to reduce spam. Learn how your comment data is processed.

Next Post

ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ

Thu Feb 25 , 2021
ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ ಅಬುಧಾಬಿ : 25.02.2021 ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ […]