ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ

ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ

ಹೆಮ್ಮೆಯ ಕನ್ನಡಿಗರಿಂದ ದುಬೈ ದಸರಾ ಪ್ರತಿಭಾ ಪುರಸ್ಕಾರ ಪ್ರದಾನ.

 ಅಬುಧಾಬಿ : 20.02.2021

ಶಾರ್ಜಾ ದೆಹಲಿ ಪ್ರೈವೇಟ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರು ಹೆಚ್ಚು ಅಂಕ ಗಳಿಸಿ ವಿದ್ಯಾಭ್ಯಾಸದಲ್ಲಿ ಮಾಡಿದ ಸಾಧನೆಗಾಗಿ  ದುಬೈ ಸರ್ಕಾರದ  ಶಿಕ್ಷಣ ಮಂಡಳಿ ನೀಡುತ್ತಿರುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಮ್ ಪ್ರಶಸ್ತಿಯನ್ನು 2019-2020 ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿದ್ದು ಸಮಸ್ತ ಯುಎಇ ಅನಿವಾಸಿ ಕನ್ನಡಿಗರಿಗೆ ಅಭಿಮಾನವನ್ನು ತಂದುಕೊಟ್ಟಿದ್ದು ವಿಧ್ಯಾರ್ಥಿಯ ಸಾಧನೆಯನ್ನು ಹೆಮ್ಮೆಯ ಯುಎಇ ಕನ್ನಡಿಗರು ತಂಡವು ದುಬೈ ದಸರಾ ಕ್ರೀಡೋತ್ಸವದಂದು ಸನ್ಮಾನ ಮಾಡಿದರು.
ಶ್ರೇಯಸ್ ದಕ್ಷಿಣ ಕನ್ನಡದ ಬಂಟ್ವಾಳ  ಮೂಲದ ಪ್ರಸಾದ್ ಮಹಾಲಿಂಗೇಶ್ವರ ಮತ್ತು ಶ್ರುತಿ ಅವರ ಪುತ್ರ. ಬಹು-ಪ್ರತಿಭಾನ್ವಿತ ಶ್ರೇಯಸ್ ಶೈಕ್ಷಣಿಕ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮರಾಗಿದ್ದಾರೆ, ಅವರು ಬಾಲಿವುಡ್ ಮತ್ತು ಸಮಕಾಲೀನ ನೃತ್ಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರೇಯಾಸ್ ಉತ್ತಮ ಓದುಗ, ವಾಗ್ಮಿ ಮತ್ತು ಪ್ರದರ್ಶಕ ಕೂಡ. ಕನ್ನಡ ರಾಜ್ಯೋತ್ಸವ ಅಬುಧಾಬಿಯಲ್ಲಿ (2019) ಅದ್ಭುತ ಭಾಷಣ ಮಾಡಿದ್ದಾರೆ. ಶಾರ್ಜಾ ಕರ್ನಾಟಕ ಸಂಘದ 17 ನೇ ವಾರ್ಷಿಕ (2019) ದಿನಾಚರಣೆಯಲ್ಲಿ ಚಿತ್ರದುರ್ಗದ ಐತಿಹಾಸಿಕ ವ್ಯಕ್ತಿ ಮದಕರಿ ನಾಯಕನ ಏಕಪಾತ್ರಾಭಿನಯವನ್ನು ಅವರು ಕನ್ನಡ ಭಾಷೆಯಲ್ಲಿ ಮಾಡಿದರು.
 
ಇವರು ಪ್ರತಿಭಾವಂತ ಕಲಾವಿದರಾಗಿದ್ದಾರೆ ಮತ್ತು ಯುಸಿ ಡಿನೋ ಆರ್ಟ್ – ಅಚೀವರ್ಸ್ ಶಾರ್ಜಾ ಅವರ ತರಬೇತಿ ಕೇಂದ್ರದಿಂದ ತರಬೇತಿ ಪಡೆಯುತ್ತಿದ್ದಾರೆ, ಇವರ ಕಲಾಕೃತಿಗಳನ್ನು ಯುಎಇಯಾದ್ಯಂತ ವಿವಿಧ ಕಲಾ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದೆ. ಶ್ರೇಯಸ್ ಕ್ರಿಕೆಟ್ ಬಗ್ಗೆಯೂ ಒಲವು ಹೊಂದಿದ್ದಾರೆ ಶಾಲೆಯಲ್ಲಿ ತಮ್ಮ ಮನೆ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ, ಹಾಗೂ ಉತ್ತಮ ಕ್ರಿಕೆಟ್ ವಿಶ್ಲೇಷಕ  ಮತ್ತು ಶಾಲೆಯಲ್ಲಿ ಅಥ್ಲೀಟ್ಸ್ ಟೆನಿಸ್ ತರಗತಿಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಶ್ರೇಯಸ್ ಯಂಗ್ ಸೈಂಟಿಸ್ಟ್, ಪ್ಲೇಟೋನ ಪ್ಲಾನೆಟ್ ಮತ್ತು ಫನ್ ರೊಬೊಟಿಕ್ಸ್ ದುಬೈನಲ್ಲಿ ರೊಬೊಟಿಕ್ಸ್ ತರಗತಿಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.

ಈತನು ಶಿಕ್ಷಣದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ದುಬೈ ದಸರಾ ಕ್ರೀಡೋತ್ಸವ -2020 ರಲ್ಲಿ ನೀಡುವ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸದ್ದಾರೆ

ಮಾಹಿತಿ : ಹಾದಿಯ ಮಂಡ್ಯ ದುಬೈ ಕನ್ನಡತಿ

Comment here

This site uses Akismet to reduce spam. Learn how your comment data is processed.

Next Post

ಶಿಲ್ಪಿ ಒಂದು ಕವಿತ - ಯಶೋದಾ ಭಟ್ಟ, ದುಬೈ

Thu Mar 18 , 2021
ಶಿಲ್ಪಿ ನಿನ್ನ ಬದುಕಿನ ಶಿಲ್ಪಿ ನೀನೇ ಆಗು ಹಿಗ್ಗದೆಯೇ ಕುಗ್ಗದೆಯೇ ಮುಂದೆ ಸಾಗು ಕಲ್ಲಿರಲಿ ಮುಳ್ಳಿರಲಿ ಏನೇ ಇರಲಿ ಎಲ್ಲವನು ಹೂವಾಗಿಸುವ ಧ್ಯೇಯವಿರಲಿ ನಿನ್ನೊಳಗೇ ಇಹುದು ಪ್ರಚಂಡ ಶಕ್ತಿ ಮಹಾಪೂರ ನಿನ್ನೊಳೇ ಇಹುದು ಆತ್ಮಸ್ಥೈರ್ಯ ಚೈತನ್ಯದ ಭಂಡಾರ ಹೆಗ್ಗುರಿಯೆಡೆ ಸದಾ ನಿನ್ನ ಧ್ಯಾನವಿರಲಿ ಎಡವದೆಯೇ ಸಾಗುವ ಗಮನವಿರಲಿ ಶರದಗುರಿಯ ನಿಚ್ಚಳತೆ ನಿನ್ನಲಿರಲಿ ರವಿತೇಜ ಪ್ರಖರಪುಂಜ ಜೊತೆಯೊಳಿರಲಿ ಕರುಣೆ ಸ್ನೇಹ ಪ್ರೇಮವನೆಲ್ಲ ನೀ ಹೊಂದಿರು ದಯೆ ದಾನ ಧರ್ಮವನೆಲ್ಲ ಗೈಯುತಲಿರು ಮೃಣ್ಮಯ […]