ದುಬೈ… ಧರೆಯು ಹಡೆದ ಸುಂದರ ಮಾಯಾ ನಗರಿ ನೀ.

ದುಬೈ…
ಧರೆಯು ಹಡೆದ ಸುಂದರ ಮಾಯಾ ನಗರಿ ನೀ.
ಸುರಭಿಯ ಬೆಲೆಯಂತೆ ಕಡಲಿನ ಅಲೆಯಂತೆ ದುಪ್ಪಟ್ಟು ನೀ..
ಜಗಮಗಿಸುವ ಬೆಳಕು ಚೆಲ್ಲುವ ಮಾಯಾಂಗನೆ ನೀ.
ಬಾನ ಮುಟ್ಟಲು ಭೂರ್ಜಾ ಖಲೀಫವೆಂಬ ಬಾನೆತ್ತರದ ಏಣಿಯ ಕೊಟ್ಟವಳು ನೀ.

ಹಲವು ಜಾತಿ ಹಲವು ಧರ್ಮಗಳ ಮಕ್ಕಳ ಪಾಲಿಗೆ
ತೊಟ್ಟಿಲಾದವಳು ನೀ.
ಕೂಡಿ ಬಾಳಲು ಬಾಳ ಕಟ್ಟಲು ಬೆಂಬಲದ ಬೆಟ್ಟ ನೀ.
ಸಾವಿರ ಬಗೆಯ ಸ್ವಚ್ಛಂದ ಸುಚಿಯ ತಿನಿಸು ಕೊಟ್ಟವಳು ನೀ.
ಕಣ್ಣ ಕನ್ನಡಿಯಲಿ ನಿನ್ನ ಸೊಬಗು ಸಾವಿರ ಪಟ್ಟು.
ಮನದ ಮುನ್ನುಡಿಯಲಿ ನಿನ್ನ ತನವು ನನಗೆ ಮಾತ್ರ ಗೊತ್ತು.

ಬಣ್ಣಿಸುವೆ ನಿನ್ನನ್ನು ನಾ ಭಾವನೆಗಳ ರಾಶಿಯ ಪದವನ್ನು ಕೊಟ್ಟು.
ರಾಷ್ಟ್ರೀಯ ದಿನದ ಕುರಿತಾಗಿ ನನ್ನದೊಂದು ಕವಿತೆಯ ಕೊಟ್ಟು.
ಇದು ನನ್ನ ಭಾಗ್ಯವೆಂದೇ ಭಾವಿಸುವೆನು ನಾ.
ನಿನ್ನ ಒಡಲ ಕುಡಿಯಾಗಿ, ನಿನ್ನ ತನುಮನದ ಸೆಲೆಯಾಗಿ.
ಸೆರೆಯಾದೆ ನಿನಗೆ ನಾ ನನ್ನ ಸಲುವಾಗಿ.
ನೆಲೆಯಾದೆ ನನಗೆ ನೀ ನನ್ನ ಬಾಳಿಗಾಗಿ.

– ಚಂದ್ರು✍️♥️

Comment here

This site uses Akismet to reduce spam. Learn how your comment data is processed.

Next Post

Flight request

Sat Dec 5 , 2020
*ಆಹಾರ ಮತ್ತು ವೈದ್ಯಕೀಯ* ಸಹಾಯ ಪಡೆಯಲು ಕನ್ನಡಿಗರು ನಮ್ಮ www.dubaikannadigaru.com ವೆಬ್ಸೈಟಲ್ಲಿ ನೋಂದಣಿ ಮಾಡಿಕೊಳ್ಳಿ. Dear UAE Kannadigas register in our website to avail *Food and Medical Help* ಸಹಾಯ ಹಸ್ತ ವಿಭಾಗ *COVID-19 Help Desk-Dubai* ಹೆಮ್ಮೆಯ ಯುಎಇ ಕನ್ನಡಿಗರು ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್         ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ಕನ್ನಡಿಗರು ಮತ್ತು ಕೋವಿಡ್ […]