ದುಬೈ ಹೆಮ್ಮೆಯ ಕನ್ನಡತಿಯರು ಅರ್ಪಿಸುವ ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಏಪ್ರಿಲ್ 9ಕ್ಕೆ

ದುಬೈ ಹೆಮ್ಮೆಯ ಕನ್ನಡತಿಯರು ಅರ್ಪಿಸುವ ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಏಪ್ರಿಲ್ 9ಕ್ಕೆ

ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಹಿಳಾ ಘಟಕವಾದ ಹೆಮ್ಮೆಯ ಯುಎಇ ಕನ್ನಡತಿಯರು ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾತ್ಮಕ ಪ್ರತಿಭಾ ಸ್ಪರ್ಧೆಯನ್ನು ಇದೆ ಏಪ್ರಿಲ್ ತಿಂಗಳ 9ರಂದು ಸಂಜೆ 4ರಿಂದ ಜೂಮ್ ಮುಕಾಂತರ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ವಾದ್ಯ ಸಂಗೀತ, ಡ್ರಾಯಿಂಗ್ ಮತ್ತು ಕಲರಿಂಗ್ ಸ್ಪರ್ಧೆ ಮುಂತಾದ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದರು,
 
ನೋಂದಣಿ ಮಾಡಲು www.dubaikannadigaru.com/events/kids-talent-competition ವೆಬ್ಸೈಟ್ ಸಂದಶಿಸಬೇಕಾಗಿ ಆಯೋಜಕರು ತಿಳಿಸಿದ್ದಾರೆ.
 
ಕಾರ್ಯಕ್ರಮದ ಪ್ರಯುಕ್ತ ಕರೆದ ವಾರ್ತಾ ಹೇಳಿಕೆಯಲ್ಲಿ ಪ್ರತಿಭಾ ಸ್ಪರ್ಧೆ ಮುಖ್ಯ ಸಂಘಟಕರು ಮತ್ತು ಹೆಮ್ಮೆಯ ಕನ್ನಡತಿಯರು ವಿಭಾಗದ ಮುಖ್ಯ ಸಂಚಾಲಕಿಯರಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯ ಮಂಡ್ಯ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು , ಈ ಸಮಯದಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು , ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ,ಶ್ರೀಮತಿ ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
 

Comment here

This site uses Akismet to reduce spam. Learn how your comment data is processed.

Next Post

ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

Fri Apr 16 , 2021
ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ   ದುಬೈ ಹೆಮ್ಮೆಯ ಕನ್ನಡತಿಯರ ವೇದಿಕೆಯಲ್ಲಿ  ಕನ್ನಡ ಮಕ್ಕಳಿಂದ ಪ್ರತಿಭಾ  ಸ್ಪರ್ಧೆ ಅಬುಧಾಬಿ :  13.04.2021 ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು, ನಾಲ್ಕು ವರ್ಷ್ ಪ್ರಾಯದಿಂದ ಏಳು ವರ್ಷಗಳ ವಯೋಮಾನದ ಮಕ್ಕಳಿಗೆ […]