ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ ಉದ್ಯೋಗಮೇಳ ಮತ್ತು ವೃತ್ತಿ ಕಾರ್ಯಾಗಾರ

ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ  ಮತ್ತು ವೃತ್ತಿ  ಕಾರ್ಯಾಗಾರ 
 

ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ

ಅಬುಧಾಬಿ :  05.03.2021

ಸಂಯುಕ್ತ  ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು  ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು  ಸಂಘದ ವತಿಯಿಂದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ -2021  ಎಂಬ ಕಾರ್ಯಕ್ರಮ ಫೆಬ್ರವರಿ  26ರಂದು ಜೂಮ್ ಅಂತರ್ಜಾಲದ ಮೂಲಕ ನಡೆಯಿತು , ಈ ಒಂದು ಕಾರ್ಯಕ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಎಮಿರೇಟುಗಳಿಂದ ಕೆಲಸ ಹುಡುಕುವ ಹಲವು  ಕನ್ನಡಿರು ಪಾಲ್ಗೊಂಡು ನುರಿತ ತರಬೇತುದಾರರಿಂದ ಜಾಬ್ ಇಂಟರ್ವ್ಯೂ ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ಹತ್ತು ಹಲವು  ವಿಷಯದ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ಪಡೆದುಕೊಂಡರು ಹಾಗು ಹಲವು ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಿಂದ ಹಲವು ರೀತಿಯ ಉದ್ಯೋಗ ಅವಕಾಶ ಲಭಿಸಿತು.

ದುಬೈ ಸಮಯ ಸರಿಯಾಗಿ ಸಂಜೆ 5ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಯುಎಇ, ಭಾರತದ ರಾಷ್ಟ್ರ ಗೀತೆ, ಕರ್ನಾಟಕ ನಾದ ಗೀತೆ  ಮೂಲಕ ಅಧಿಕೃತ ಚಾಲನೆ ನೀಡಲಾಯಿತು, ಹೆಮ್ಮೆಯ ಕನ್ನಡಿಗರು ತಂಡದ ಮಹಿಳಾ ಘಟಕದ ಸಂಚಾಲಕಿಯಾದ ಶ್ರೀಮತಿ ಹಾದಿಯ ಮಂಡ್ಯ ಅವರು ಸಭೆಗೆ ಆಗಮಿಸಿದ ಸರ್ವ ಗಣ್ಯರನ್ನು , ಅಭ್ಯರ್ಥಿಗಳನ್ನು, ವೀಕ್ಷಕರನ್ನು ಮತ್ತು ಮಾರ್ಗದರ್ಶಕರನ್ನು ಸ್ವಾಗತ ಮಾಡಿದರು, ತಂಡದ ಮಹಿಳಾ ಘಟಕದ ಮತ್ತೊಬ್ಬರು ಸಂಚಾಲಕಿಯಾದ ಶ್ರೀಮತಿ ಪಲ್ಲವಿ ದಾವಣಗೆರೆ ಅವರು ಇಂದಿನ ಕಾರ್ಯಕ್ರಮದ ಉದ್ದೇಶ ತಿಳಿಸಿದರು ಹಾಗು  ಹೆಮ್ಮೆಯ ಕನ್ನಡಿಗರು ಮಾಡಿದ ಕಾರ್ಯಗಳ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ತಂಡವು ಮಾಡಲಿರುವ ಕಾರ್ಯಕ್ರಮದ ಮತ್ತು ಕಾರ್ಯಗಳ ಬಗ್ಗೆ ಹಾಗು ತಂಡದ  ಸರ್ವ ಸಮಿತಿ ಸದಸ್ಯರ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ಅಲಂಕರಿಸಿ ತಂಡದ ಕಾರ್ಯಗಳು ಮತ್ತು ತಂಡಕ್ಕೆ ಯುಎಇ ಕನ್ನಡಿಗರ ಬೆಂಬಲ ಮುಂತಾದ ಹಿತನುಡಿಗಳನ್ನು ನುಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯುಎಇಯಲ್ಲಿನ ಕನ್ನಡ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಪೋಷಕರು ಹೆಮ್ಮೆಯ ಕನ್ನಡಿಗರು ತಂಡದ ಗೌರವಾಧ್ಯಕ್ಷರು ಎಮ್ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಶ್ರೀಯುತ ಮೊಹಮ್ಮದ್ ಮುಸ್ತಫಾ ಅವರು ಪಾಲ್ಗೊಂಡು ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು, ಕಾರ್ಯಕ್ರಮದಲ್ಲಿ  ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ ಶ್ರೀಯುತ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರು ಮೋಟಿವೇಷನಲ್ ಮಾತುಗಾರರು ಆದ ಶ್ರೀಯುತ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀಮತಿ ರಾಧಾ ಜೀವನ್  ಅವರು ಕೆಲಸ ಹುಡುಕ್ಕುತ್ತಿರುವ ಅಭ್ಯರ್ಥಿಗಳಿಗೆ ಪ್ರೊಜೆಕ್ಟರ್ ಮುಂತಾದ ಸಲಕರಣೆ ಉಪಯೋಗಿಸಿ ಬಹಳ ಉತ್ತಮ ರೀತಿಯಲ್ಲಿ ಮನಸ್ಸಿನಲ್ಲಿ ನಾಟುವ ಹಾಗೆ ಸಿ ವಿ ಹೇಗೆ ಇರಬೇಕು, ಸಂದರ್ಶನ ಹೇಗೆ ಎದುರಿಸಬೇಕು, ಯಾವ ಯಾವ ಕಡೆಗಳಲ್ಲಿ ಕೆಲಸಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಇತ್ಯಾದಿ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಜಾಬ್ ಪೋರ್ಚಲ್ ವಿಭಾಗದ ಸಂಚಾಲಕರಾದ ನವೀನ ಬೆಂಗಳೂರು ಅವರು ಪ್ರೇರಣಾ ಮಾತುಗಳಿಂದ ತಮ್ಮದೇ ಶೈಲಿಯಲ್ಲಿ ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಾ ಬಹಳ ಅಚ್ಚುಕಟ್ಟಾಗಿ ಕೊನೆಯವರೆಗೂ ನೆರವೇರಿಸಿದರು, ಕರ್ನಾಟಕ ಏನ್ ಆರ್ ಐ ಫೋರಮ್ ಯುಎಇ ಘಟಕದ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದು ಅಲ್ಲದೆ  8ಜನ ಕನ್ನಡಿಗರಿಗೆ ತಮ್ಮ ಹೋಟೆಲಿನಲ್ಲಿ ಕೆಲಸವನ್ನು ನೀಡಿದರು, ತಂಡದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರು ಕೆಲಸ ಹುಡುಕಲು ಕೆಲವು ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ದುಬೈ ಕನ್ನಡ ಸಾಹಿತ್ಯ ಘಟಕದ ಮುಖ್ಯ ಸಂಚಾಲಕರಾದ ವಿಷ್ಣುಮೂರ್ತಿ ಮೈಸೂರು ಅವರು ಬಾಗವಹಿಸಿದ ಎಲ್ಲಾ ಮಾರ್ಗದರ್ಶಕರಿಗೂ, ಉದ್ಯಮಿಗಳಿಗೂ, ಅತಿಥಿಗಳಿಗೂ, ಅಭ್ಯರ್ಥಿಗಳಿಗೂ, ವೀಕ್ಷರಿಗೂ, ನಿರೂಪಕರಿಗೂ ಹಾಗು ಕಾರ್ಯಕ್ರಮ ಯಶಸ್ವಿಯಾಗಲು ಬಹಳ ಶ್ರಮಪಟ್ಟ ತಂಡದ ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು ಮತ್ತು ತಂಡದ ಮಾಧ್ಯಮ ಘಟಕದ ಸದಸ್ಯರಾದ ಸಾದತ್ ಬೆಂಗಳೂರು ಅವರಿಗೂ ಹಾಗು ತಂಡದ ಎಲ್ಲಾ ಸದಸ್ಯರಿಗೂ ವಂದನಾರ್ಪಣೆಗಳನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Comment here

This site uses Akismet to reduce spam. Learn how your comment data is processed.

Next Post

ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಪ್ರಶಸ್ತಿ ವಿಜೇತೆ ಯುಎಇ ಕನ್ನಡ ವಿದ್ಯಾರ್ಥಿ ದಾನಿಯಾಗೆ ದುಬೈ ದಸರಾ ಪ್ರಶಸ್ತಿ

Fri Mar 5 , 2021
ಯುಎಇ  ಕನ್ನಡ ವಿದ್ಯಾರ್ಥಿನಿ ದಾನಿಯಾಗೆ ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಮುಬಾರಕ್  ಪ್ರಶಸ್ತಿ, ಹೆಮ್ಮೆಯ ಕನ್ನಡಿಗರಿಂದ ವಿದ್ಯಾರ್ಥಿನಿಗೆ ದುಬೈ ದಸರಾ ಪ್ರತಿಭಾ ಪುರಸ್ಕಾರ ದುಬೈ :  25.02.2021 ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕನ್ನಡ ಮಗಳು ದಾನಿಯಾ ಹಸನ್ ಫುಜೈರಾದ ಜೆಮ್ ವಿಂಚೆಸ್ಟರ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ, ಯುಎಇಯ ಪ್ರತಿಷ್ಠಿತ ‘ಹರ್ ಹೈನೆಸ್ ಶೇಖಾ ಫಾತಿಮಾ ಬಿನ್ತ್ ಮುಬಾರಕ್ ಪ್ರಶಸ್ತಿ 2020ಅನ್ನು ಪಡೆದಿದ್ದಾರೆ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಶಿರೂರ್ನಲ್ಲಿರುವ […]