ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಪ್ರಶಸ್ತಿ ವಿಜೇತೆ ಯುಎಇ ಕನ್ನಡ ವಿದ್ಯಾರ್ಥಿ ದಾನಿಯಾಗೆ ದುಬೈ ದಸರಾ ಪ್ರಶಸ್ತಿ

ಯುಎಇ  ಕನ್ನಡ ವಿದ್ಯಾರ್ಥಿನಿ ದಾನಿಯಾಗೆ ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಮುಬಾರಕ್  ಪ್ರಶಸ್ತಿ, ಹೆಮ್ಮೆಯ ಕನ್ನಡಿಗರಿಂದ ವಿದ್ಯಾರ್ಥಿನಿಗೆ ದುಬೈ ದಸರಾ ಪ್ರತಿಭಾ ಪುರಸ್ಕಾರ

ದುಬೈ :  25.02.2021

ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕನ್ನಡ ಮಗಳು ದಾನಿಯಾ ಹಸನ್ ಫುಜೈರಾದ ಜೆಮ್ ವಿಂಚೆಸ್ಟರ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ, ಯುಎಇಯ ಪ್ರತಿಷ್ಠಿತ ‘ಹರ್ ಹೈನೆಸ್ ಶೇಖಾ ಫಾತಿಮಾ ಬಿನ್ತ್ ಮುಬಾರಕ್ ಪ್ರಶಸ್ತಿ 2020ಅನ್ನು ಪಡೆದಿದ್ದಾರೆ.

ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಶಿರೂರ್ನಲ್ಲಿರುವ ಗ್ರೀನ್ ವ್ಯಾಲಿ ರಾಷ್ಟ್ರೀಯ ಶಾಲೆಯ ಅಧ್ಯಕ್ಷರಾಗಿರುವ ಡಾ. ಸೈಯದ್ ಹಸನ್ ಅವರ ಪುತ್ರಿ ದಾನಿಯಾ ಹಸನ್. ಅವರು ತಮ್ಮ ಹೆತ್ತವರೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಫುಜೆರಾ ರಾಜ್ಯದ  ಖೋರ್ಫ್ಕಾನ್ ನಗರದಲ್ಲಿ ವಾಸಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರ್ ತಾಲೂಕಿನ ಶಿರೂರ್ ಮೂಲದ ಹದಿನಾರು ವರ್ಷದ ವಿದ್ಯಾರ್ಥಿನಿ ದಾನಿಯಾ ಹಸನ್, ಯುನೈಟೆಡ್ ಅರಬ್ ಎಮಿರೇಟ್ಸ್ನ ಪೂರ್ವ ಪ್ರದೇಶದ ಈ ವಿದ್ಯಾರ್ಥಿಗೆ ಗೌರವ ದೊರಕಿದ ಏಕೈಕ ವಿದ್ಯಾರ್ಥಿಯಾಗಿದ್ದಾರೆ

ಈ ಪ್ರಶಸ್ತಿಯನ್ನು ಯಾವುದೇ ದೇಶದ ವಿದ್ಯಾರ್ಥಿಗೆ ಯಾವುದೇ ಪೌರತ್ವದ ವ್ಯತ್ಯಾಸವಿಲ್ಲದೆ ವಿದ್ಯಾರ್ಥಿಯ ಸಾಧನೆಯ ಆಧಾರದ ಮೇಲೆ ನೀಡಲಾಗುತ್ತದೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಸಂಪೂರ್ಣ ವೆಚ್ಚವನ್ನು ಭರಿಸುವುದರ ಜೊತೆಗೆ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

ದಾನಿಯಾ ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆ, ನಾಯಕತ್ವದ ಕೌಶಲ್ಯ ಮತ್ತು ಸಾಮಾಜಿಕ, ಪರಿಸರ ಮತ್ತು ಜಾಗತಿಕ ಪೌರತ್ವಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಲಾಯಿತು.

ಇವರ ಈ ಮೇಲಿನ ಸಾಧನೆಗಾಗಿ ಮತ್ತು ಯುಎಇ ಕನ್ನಡಿಗರಿಗೆ ಅಭಿಮಾನವನ್ನು ತಂದುಕೊಟ್ಟ ಹೆಮ್ಮೆ ಯುಎಇ ಕನ್ನಡಿಗರು ದುಬೈ ಕನ್ನಡ ಸಂಘವು  ಅಕ್ಟೋಬರ್ 30, 2020 ರಂದು ದುಬೈ ದಸರಾ ಕ್ರೀಡಾಕೂಟದಲ್ಲಿ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ  ನೀಡಿ  ಗೌರವಿಸಲಾಯಿತು.

Comment here

This site uses Akismet to reduce spam. Learn how your comment data is processed.

Next Post

ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ

Fri Mar 5 , 2021
ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ ಹೆಮ್ಮೆಯ ಕನ್ನಡಿಗರಿಂದ ದುಬೈ ದಸರಾ ಪ್ರತಿಭಾ ಪುರಸ್ಕಾರ ಪ್ರದಾನ.  ಅಬುಧಾಬಿ : 20.02.2021 ಶಾರ್ಜಾ ದೆಹಲಿ ಪ್ರೈವೇಟ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರು ಹೆಚ್ಚು ಅಂಕ ಗಳಿಸಿ ವಿದ್ಯಾಭ್ಯಾಸದಲ್ಲಿ ಮಾಡಿದ ಸಾಧನೆಗಾಗಿ  ದುಬೈ ಸರ್ಕಾರದ  ಶಿಕ್ಷಣ ಮಂಡಳಿ ನೀಡುತ್ತಿರುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಮ್ ಪ್ರಶಸ್ತಿಯನ್ನು 2019-2020 […]