*ಯು ಎ ಇ ರಾಷ್ಟ್ರೀಯ ದಿನ

*ಯು ಎ ಇ ರಾಷ್ಟ್ರೀಯ ದಿನ

ಧರೆಯೊಳು ಅನುಪಮ ಸುಂದರ ನೆಲೆಯು
ಸಂಯುಕ್ತ ಅರಬ್ ರಾಷ್ಟ್ರವು ಖೊಲ್ಲಿಯ ಈ ರಾಷ್ಟ್ರವು
ಮರಳುಗಾಡಿನೊಳ್ ಸೃಷ್ಟಿಸಿ ಸುರಪುರಿ
ಮೆರೆದ ಶೇಖರು ಯು ಎ ಇ ಸಾರ್ವಭೌಮರು||…,,,,

ಶೇಖ್ ಝಾಯೇದರ ಕನಸಿನ ಕೂಸು
ಶೇಖ ರಷೀದರ ಸುಂದರ ಕನಸು
ಪ್ರತಿ ಪ್ರಜೆಗಳ ಈ ಭವ್ಯದ ನನಸು
ಯು ಎ ಇ ನಿರ್ಮಾಣವು ಸ್ವಾತಂತ್ರ್ಯದ ಹರ್ಷವು||….

ಏಳು ಬಣ್ಣಗಳ ಕಾಮನ ಬಿಲ್ಲಂತೆ
ಸಪ್ತ ರಾಜ್ಯಗಳ ಅವಿಭಾಜ್ಯ ಒಕ್ಕೂಟ
ಆದರ ಸಮ್ಮಾನ ಭಾವೈಕ್ಯತೆಗಳ
ಸುಂದರ ಸಂಗಮವು ಬಣ್ಣಿಸಲಸದಳವು||…..

ವಿಶ್ವದಿ ಪ್ರಸಿದ್ಧ ತಾಂತ್ರಿಕ ವಿಸ್ಮಯ
ಬುರ್ಜ್ ಖಲೀಫಾ ಬುರ್ಜ ಅಲ್ ಅರಬ್
ಎಮಿರೇಟ್ಸ ಪ್ಯಾಲೇಸ್ ಫೆರಾರಿ ವರ್ಲ್ಡ ಎಲ್ಲಾ
ಭವ್ಯತೆ ಪ್ರತೀಕವು ಅನೂಹ್ಯ ಅದ್ಭುತವು||…..

ಶೇಖ ಮೊಹಮದರ ಉನ್ನತ ನಿಲುವು
ಗಗನ ಚುಂಬಿ ಕಟ್ಟಡ ಕಾರ್ನಿಷ್ಗಳು
ಉದ್ಯಾನವನಗಳು ಕಾರಂಜಿ ಜಲಪಾತ
ಎಲ್ಲಾ ಅದ್ಭುತವು ಇಲ್ಲೇ ಪ್ರಸ್ತುತವು||….

ಸ್ವಾತಂತ್ರ್ಯದಾಚರಣೆಯ ಸಂಭ್ರಮವು
ನಲವತ್ತೊಂಬತ್ ವರುಷದ ಈ ಶುಭದಿನವು
ನೃತ್ಯ ಸಂಗೀತ ಪಟಾಕ್ಷಿ ಸ್ಫುರಣೆಯು
ಬೆಳಕಿನ ಸಡಗರವೂ ಈ ಮಹಾಪರ್ವದ ದಿನವು||…..

ನಮ್ಮ ಕರ್ಮಭೂಮಿ ಹೆಮ್ಮೆಯ ನೆಲೆಯು
ಸರ್ವಧರ್ಮಗಳ ಸಮನ್ವತೆ ಒಲವು
ತುಂಬಿಹ ಘನತಮ ಮಂಗಲ ನೆಲವು
ಯು ಎ ಇ ಬಲು ಪ್ರಿಯವು ಯು ಎಇಗೆ ಜಯವು||…,.

We love UAE ಶುಕ್ರಾನ್ UAE
ನಮ್ಮ ನಲ್ಮೆಯ ಯು ಎ ಇ

ಯಶೋದಾ ಭಟ್ಟ ದುಬೈ

Comment here

This site uses Akismet to reduce spam. Learn how your comment data is processed.

Next Post

ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ

Wed Dec 2 , 2020
ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ ಹೆಮ್ಮೆಯ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ ಅರಬರ ನಾಡಲಿ ಕನ್ನಡ ಮಾತೆಗೆ ನಿತ್ಯೋತ್ಸವ. ಅನಿವಾಸಿ ಕನ್ನಡಿಗರು ಆಚರಿಸುವರು ಕನ್ನಡಮ್ಮನ ಉತ್ಸವವಿಲ್ಲಿ ವರುಷ ವರುಷ ಬಡಿದ್ದೆಬ್ಬಿಸಿದೆ ಪ್ರತಿಯೊಬ್ಬ ಕನ್ನಡಿಗನೆದೆಯಲಿ ಅಭಿಮಾನದ ಹರುಷ. ಕನ್ನಡವೇ ಕುಲ, ಕನ್ನಡವೇ ಧರ್ಮವೆಂಬ ಒಗ್ಗಟ್ಟಿನ ಬಲ, ಪರ ನಾಡಿನಲಿ ಒಟ್ಟಾಗಿ ದುಡಿದು ಸಾಧಿಸುವ ಛಲ. ಇಸ್ಲಾಂ ನಾಡಾದರೂ, ಸಾರಿದೆ ಸರ್ವ ಧರ್ಮ ಸಮನ್ವಯ (ಟೊಲೆರಾನ್ಸ್ ಇಯರ್ ) ಮಂದಿರ, ಗುರು ದ್ವಾರ, […]