ರಕ್ತದಾನ ಶಿಬಿರದ ಮೂಲಕ ರಾಜ್ಯೋತ್ಸವ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆ ಆಚರಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ

ರಕ್ತದಾನ ಶಿಬಿರದ ಮೂಲಕ ರಾಜ್ಯೋತ್ಸವ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆ ಆಚರಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ

ದುಬೈ ಹೆಮ್ಮೆಯ ಯುಎಇ ಕನ್ನಡಿಗರು ವತಿಯಿಂದ ನಡೆದ ಯಶಸ್ವೀ ರಕ್ತದಾನ ಶಿಬಿರ 

ಅಬುಧಾಬಿ : 09.02.2020
65ನೇ ಕನ್ನಡ ರಾಜ್ಯೋತ್ಸವ ಮತ್ತು 49ನೇ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ದಿನಾಂಕ 03.12.2020ರಂದು ದುಬೈಯ ಶೇಕಾ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತ್ತು , ಮದ್ಯಾಹ್ನ 2ರಿಂದ ಸಂಜೆ 8ರವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಹಲವು ರಕ್ತದಾನಿಗಳು ಪಾಲ್ಗೊಂಡರು, ರಕ್ತ ದಾನ ಮಾಡಿದವರಿಗೆ ಸರ್ಟಿಫಿಕೇಟ್ ನೀಡಲಾಯಿತ್ತು, ಸುಮಾರು 200ದೇಶಗಳಿಂದ ಜೀವನ ಕಟ್ಟಿಕೊಳ್ಳಲು ಸಂಯುಕ್ತ ಅರಬ್ ಸಂಸ್ಥಾನಕ್ಕೆ  ಬಂದ ಅನಿವಾಸಿಗಳು ಈ ದೇಶದ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಕ್ತದಾನ ನೀಡಿದ್ದು ಈ ಕರ್ಮ ಭೂಮಿಗೆ ನಮ್ಮಿಂದ ಸಣ್ಣ ಮಟ್ಟದ ಕಾಣಿಕೆ ಮತ್ತು ಗೌರವ ಸೂಚಕ ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದರು.
ರಕ್ತದಾನ ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಎಮ್ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರು ಕನ್ನಡ ಸಂಘ ಕಾರ್ಯಕ್ರಮಗಳ ಪೋಷಕರಾದ ಶ್ರೀ ಮೊಹಮ್ಮದ್ ಮುಸ್ತಫಾ ಅವರು ಆಗಮಿಸಿ ಉದ್ಘಾಟಿಸಿದರು.

ರಕ್ತದಾನ ಶಿಬಿರದ ಆಯೋಜಕರಾಗಿ ರಫೀಕಲಿ ಕೊಡಗು , ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಫಿರೋಜ್ ಮಂಗಳೂರು, ಮಮತಾ ಶಾರ್ಜಾ, ನಿಜಾರ್ ಕಾಸರಗೋಡು ಕನ್ನಡಿಗ, ವರದರಾಜ್ ಬೆಂಗಳೂರು, ಡಾ.ಸವಿತಾ v, ಪಲ್ಲವಿ ದಾವಣಗೆರೆ, ಮಮತಾ ಮೈಸೂರು, ಅಕ್ರಮ್ ಕೊಡಗು, ಯತೀಶ್ ಹಾಸನ, ಅಬ್ದುಲ್ ಹಾದಿ ಕುಂದಾಪುರ ಮುಂತಾದವರು ಒಳ್ಳೆಯ ರೀತಿಯಲ್ಲಿ ಆಯೋಜಿಸಿ ಆಸ್ಪತ್ರೆ ಸಿಬ್ಬಂದಿಗಳ ಪ್ರಶಂಸೆಗೆ ಪಾತ್ರರಾದರು . ಮುಖ್ಯ ಆಯೋಜಕರಾದ ರಫೀಕಲಿ ಕೊಡಗು ಅವರು ರಕ್ತದಾನಿಗಳಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು ಸಹ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು 

Comment here

This site uses Akismet to reduce spam. Learn how your comment data is processed.

Next Post

Mai Blue Purification of Potable Water LLC

Thu Dec 17 , 2020
ಕನ್ನಡಿಗರ ವ್ಯಾಪಾರದ ವಿವರ/ಬೆಂಬಲಿಸಿ Type : Drinking Water Mai Blue Purification of Potable Water LLC Ph : 04 259 7883 ,FAX : 04 456 2025 , Mob : 052 337 2181 P.O Box – 42796. Al Qusais Industrial 4 , Near Bin Ghalib Engineering Dubai , U.A.E Prop : Mr.Ganesh Kannadiga