ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ: ನಾಳೆಯಿಂದ ಏರ್ ಪೋರ್ಟ್ ಗಳಲ್ಲಿ ಟೆಸ್ಟ್

 

ಕೋವಿಡ್ ಎರಡನೇ ಆವೃತ್ತಿ ? ದುಬೈ ನ್ಯೂಸ್ ಡೆಸ್ಕ್ : 22.12.2020

ಬೆಂಗಳೂರು: ಇಂಗ್ಲೇಂಡ್ ನಲ್ಲಿ ಹೊಸ ವಂಶವಾಹಿನಿಯ ವೈರಸ್ ಪತ್ತೆಯಾಗಿದೆ. ಮೂರು ದೇಶಗಳಲ್ಲಿ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದ್ದು ಈ ಹಿನ್ನೆಲೆ ಕೇಂದ್ರ ಸರ್ಕಾರ ನಿಗಾವಹಿಸಲು ಸೂಚಿಸಿದೆ. ಹೀಗಾಗಿ ವಿದೇಶದಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಇಂಗ್ಲೇಂಡ್ ನಲ್ಲಿ ಹೊಸ ವಂಶವಾಹಿನಿಯ ವೈರಸ್ ಪತ್ತೆಯಾಗಿದೆ. ಹೊಸ ವೈರಸ್ ಕೊರೋನಾಗಿಂತ ಬೇಗನೆ ಹರಡುತ್ತದೆ. ಈ ಹಿಂದಿನ ಕೊರೋನಾಗಿಂತಲೂ ಬಹುಬೇಗ ಹರಡುತ್ತದೆ. ಯುಕೆಯಿಂದ ವಿಮಾನದಲ್ಲಿ 138 ಮಂದಿ ಬಂದಿದ್ದಾರೆ. ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಂದಿದ್ದಾರೆ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರರ ಸರ್ಕಾರದ ಆದೇಶ ಪಾಲಿಸಲು ಸರ್ಕಾರ ಸಿದ್ಧ. ಹೀಗಾಗಿ ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ. ವಿದೇಶದಿಂದ ಬಂದವರು RTPCR ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದರು. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೋನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರೂ ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ವಹಿಸಲ್ಲ ಎಂದು ಸುಧಾಕರ್ ತಿಳಿಸಿದರು.

 

 

Comment here

This site uses Akismet to reduce spam. Learn how your comment data is processed.

Next Post

ಕೊರೋನ ಎರಡನೇ ಆವೃತ್ತಿ ?

Tue Dec 22 , 2020
ಕೊರೋನ ಎರಡನೇ ಆವೃತ್ತಿ ? ದುಬೈ ವಾರ್ತೆ : 21.12.2020 ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ವೈರಸ್ ವೈರಾಣು ಕಂಡು ಬಂದಿದ್ದರಿಂದ ಯುಕೆ ಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳು ನಿಷೇಧ ಹೇರಿದೆ , ದುಬೈಯಿಂದ ಸೌದಿಗೆ ಹೋಗಲು ಇರುವ ಎಲ್ಲಾ ರೀತಿಯ ಮಾರ್ಗವನ್ನು ಮುಚ್ಚಲಾಗಿದೆ,ಇದರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿ ಹಲವು ವಿದೇಶಿಗರು ದುಬೈ ಮೂಲಕ ಸೌದಿ ಪ್ರವೇಶಕ್ಕೆ ತಡೆ ಬಿದ್ದಿದೆ. […]