ಶಿಲ್ಪಿ ಒಂದು ಕವಿತ – ಯಶೋದಾ ಭಟ್ಟ, ದುಬೈ

ಶಿಲ್ಪಿ

ನಿನ್ನ ಬದುಕಿನ ಶಿಲ್ಪಿ ನೀನೇ ಆಗು ಹಿಗ್ಗದೆಯೇ ಕುಗ್ಗದೆಯೇ ಮುಂದೆ ಸಾಗು ಕಲ್ಲಿರಲಿ ಮುಳ್ಳಿರಲಿ ಏನೇ ಇರಲಿ ಎಲ್ಲವನು ಹೂವಾಗಿಸುವ ಧ್ಯೇಯವಿರಲಿ ನಿನ್ನೊಳಗೇ ಇಹುದು ಪ್ರಚಂಡ ಶಕ್ತಿ ಮಹಾಪೂರ ನಿನ್ನೊಳೇ ಇಹುದು ಆತ್ಮಸ್ಥೈರ್ಯ ಚೈತನ್ಯದ ಭಂಡಾರ ಹೆಗ್ಗುರಿಯೆಡೆ ಸದಾ ನಿನ್ನ ಧ್ಯಾನವಿರಲಿ ಎಡವದೆಯೇ ಸಾಗುವ ಗಮನವಿರಲಿ ಶರದಗುರಿಯ ನಿಚ್ಚಳತೆ ನಿನ್ನಲಿರಲಿ ರವಿತೇಜ ಪ್ರಖರಪುಂಜ ಜೊತೆಯೊಳಿರಲಿ ಕರುಣೆ ಸ್ನೇಹ ಪ್ರೇಮವನೆಲ್ಲ ನೀ ಹೊಂದಿರು ದಯೆ ದಾನ ಧರ್ಮವನೆಲ್ಲ ಗೈಯುತಲಿರು ಮೃಣ್ಮಯ ದೇಹದಲಿ ನೀ ಮನ್ಮಯನಾಗದಿರು ಚಿನ್ಮಯಾನಂದದಲಿ ನೀ ತನ್ಮಯನಾಗಿರು ಪರರ ಕಂಬನಿಯೊರೆಸುವ ಬಂಧುವಾಗು ಮನುಜತೆಯ ಸಾಕಾರಮೂರ್ತಿ ನೀನಾಗು ಶಿಲ್ಪಿಯ ಚಾಣದಿ ರೂಪು ತಳೆದ ಭವ್ಯ ಮೂರ್ತಿಯಾಗು ಅಲ್ಪಮತಿಯ ತೊರೆದು ನೀ ವಿಶ್ವ ಮಾನವನಾಗು –ವಾಯ್ಕೆ– ಯಶೋದಾ ಭಟ್ಟ ದುಬೈ

Comment here

This site uses Akismet to reduce spam. Learn how your comment data is processed.

Next Post

ಅನಿವಾಸಿ ಕನ್ನಡಿಗ ಪ್ರಾಂಶುಪಾಲರು ನಿಧನ

Tue Mar 23 , 2021
#ಸಂತಾಪ_ಸೂಚನೆ #condolences ರಾಸ್ ಅಲ್ ಕೈಮಾ ಸ್ಕೊಲರ್ಸ್ ಇಂಡಿಯನ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಅಬುಬಕ್ಕರ್ ತುಂಬೆ ಮಂಗಳೂರು ಅವರು ಇಂದು ನಿಧನ ಹೊಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದೊಂದಿಗೆ ನಾವು ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಕುಟುಂಬವು ಸಹ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. We #TeamHUK express condolences to Ras Al Khaimah Scholars Indian School Kannadiga Professor Mr.Abubakker Thumbe Manglore passed away […]

You May Like