ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ

ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ

ಅಬುಧಾಬಿ : 25.02.2021

ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಮತ್ತು ಕುವೈತ್ ದೇಶಗಳಿಗೆ ತೆರಳುತ್ತಿದ್ದರು, ಆದರೆ ಕಳೆದ ಹಲವು ದಿನಗಳಿಂದ ವಿಶ್ವಾದ್ಯಂತ ಕೋರೋನ ಆರ್ಭಟ ಹೆಚ್ಚಿದ್ದರಿಂದ ಸೌದಿ ಮತ್ತು ಕುವೈತ್ ದೇಶಗಳು ದುಬೈಯಿಂದ ಸಹ ವಾಯು ಮಾರ್ಗ ಮತ್ತು ಗಡಿಗಳನ್ನು ಮುಚ್ಚಿ ಪ್ರಯಾಣ ನಿರ್ಬಂಧ ಹೇರಿದ್ದರಿಂದ ಸಾವಿರಾರು ಅನಿವಾಸಿಗಳು ದುಬೈಯಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಪಟ್ಟರು .

ಇವರ ಸಂಕಷ್ಟವನ್ನು ಮನಗಂಡ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಸಂಕಷ್ಟಕ್ಕೆ ಒಳಪಟ್ಟ ಅನಿವಾಸಿ ಸೌದಿ ಕುವೈತ್ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಹಾಯಕ್ಕೆ ನಿಲ್ಲಬೇಕೆಂದು ಟ್ವಿಟ್ಟರ್ ಅಭಿಯಾನವನ್ನು ಕೆಲವು ದಿನಗಳ ಹಿಂದೆ ನಡೆಸಿದ್ದು ಈ ಟ್ವಿಟ್ಟರ್ ಅಭಿಯಾನವನ್ನು ದುಬೈಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗಮನಿಸಿದ್ದಲ್ಲದೆ ಇಲ್ಲಿನ ಸ್ಥಳೀಯ ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ರಾಯಭಾರಿ ಕಚೇರಿ ಅಧಿಕೃತರು ವರದಿಯಲ್ಲಿ ಉಲ್ಲೇಖಿಸಿದ್ದರು.

ಸೌದಿ ಅರೇಬಿಯಾ ಮತ್ತು ಕುವೈತ್ ತೆರಳಲು ದುಬೈಗೆ ಬಂದು ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರಿಗೆ ಭಾರತಕ್ಕೆ ಮರಳಲು ದುಬೈ ಭಾರತೀಯ ಕಾನ್ಸುಲೇಟ್ ವತಿಯಿಂದ ನೀಡುತ್ತಿರುವ ಉಚಿತ ವಿಮಾನ ಟಿಕೆಟ್ ಸೌಲಭ್ಯದ ಕನ್ನಡಿಗರ ಅರ್ಜಿಯನ್ನು ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಸಂಘದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಂಘದ ಸಲಹಾ ಸಮಿತಿ ಸದಸ್ಯರಾದ ರಾಘವೇಂದ್ರ ಅವರು ರಾಯಭಾರಿ ಕಚೇರಿ ಅಧಿಕೃತರಿಗೆ ಹಸ್ತಾಂತರಿಸಿದರು, ಕಾನ್ಸುಲೇಟ್ ಅಧಿಕೃತರು ಅರ್ಜಿಯನ್ನು ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ 23ರಂದು ದುಬೈಯಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಲು ಉಚಿತವಾಗಿ ವಿಮಾನ ಟಿಕೆಟನ್ನು ಹೆಮ್ಮೆಯ ಕನ್ನಡಿಗರು ಸಂಘಕ್ಕೆ ಹಸ್ತಾಂತರಿಸಿದರು,

ದುಬೈ ಭಾರತೀಯ ದೂತಾವಾಸ ಕೇಂದ್ರ ಸೌದಿ ಅರೇಬಿಯಾ ಅನಿವಾಸಿ ಕನ್ನಡಿಗರಿಗೆ ನೀಡಿದ ಮೊದಲನೇ ಹಂತದ ಉಚಿತ ಟಿಕೇಟುಗಳನ್ನು ಸಡಿ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು , ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಮುಖ್ಯ ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು ಮತ್ತು ತಂಡದ ಮಹಿಳಾ ಘಟಕದ ಸಂಚಾಲಕಿ ಶ್ರೀಮತಿ ಮಮತಾ ಹಸ್ತಾಂತರಿಸಿದರು , ಸಂಘದ ಅಧ್ಯಕ್ಷರು ಭಾರತೀಯ ಕಾನ್ಸುಲೇಟ್ ಮತ್ತು ಟಿಕೆಟ್ ಪಡೆಯಲು ಹೆಮ್ಮೆಯ ಕನ್ನಡಿಗರಿಗೆ ಸಹಾಯ ಮಾಡಿದ ಕೆ ಎಮ್ ಸಿ ಸಿ ಸಂಘಟನೆಗೂ ಧನ್ಯವಾದಗಳನ್ನು ತಿಳಿಸಿ ಪ್ರಯಾಣಿಕರಿಗೆ ಶುಭ ಪ್ರಯಾಣ ಹಾರೈಸಿದರು.

ನ್ಯೂಸ್ ಡೆಸ್ಕ್ / ದುಬೈ ವಾರ್ತೆಗಳು

Comment here

This site uses Akismet to reduce spam. Learn how your comment data is processed.

Next Post

ದುಬೈ ವಾರ್ತೆಗಳು/Dubai News Desk 25.02.2021

Thu Feb 25 , 2021