ಕೊರೋನ ಎರಡನೇ ಆವೃತ್ತಿ ?

ಕೊರೋನ ಎರಡನೇ ಆವೃತ್ತಿ ? ದುಬೈ ವಾರ್ತೆ  : 21.12.2020
ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ವೈರಸ್ ವೈರಾಣು ಕಂಡು ಬಂದಿದ್ದರಿಂದ ಯುಕೆ ಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳು ನಿಷೇಧ ಹೇರಿದೆ , ದುಬೈಯಿಂದ ಸೌದಿಗೆ ಹೋಗಲು ಇರುವ ಎಲ್ಲಾ ರೀತಿಯ ಮಾರ್ಗವನ್ನು ಮುಚ್ಚಲಾಗಿದೆ,ಇದರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿ ಹಲವು ವಿದೇಶಿಗರು ದುಬೈ ಮೂಲಕ ಸೌದಿ ಪ್ರವೇಶಕ್ಕೆ ತಡೆ ಬಿದ್ದಿದೆ. ಹಾಗೆ ಒಮಾನ್ ದೇಶವು ತನ್ನ ಎಲ್ಲಾ ಗಡಿಯನ್ನು ಮುಚ್ಚಿದೆ.
ಈ ಹೊಸ ಕೊರೋನ ವೈರಸ್ ಮುಂಚೆ ಕಂಡು ಬಂದಂತ ವೈರಸ್ಸಿಗಿಂತ ತುಂಬಾ ಅಪಾಯಕಾರಿ, ತೀವ್ರ ವೇಗದಲ್ಲಿ ಹರಡುವಿಕೆ ಮತ್ತು ಹಳೆದಿಕ್ಕಿಂತ ಸೂಕ್ಷ್ಮವಾಗಿರುದರಿಂದ ಪತ್ತೆ ಹಚ್ಚಲು ಬಹಳ ಕಷ್ಟ ಸಹ, ವಿಶ್ವ ಅರೋಗ್ಯ ಸಂಸ್ಥೆ ಪ್ರಪಂಚದ ಎಲ್ಲರಲ್ಲೂ ಎಚ್ಚರದಿಂದ ಇರಲು ಸೂಚಿಸಿದೆ . ಮಹಾರಾಷ್ಟ್ರ ಸರ್ಕಾರ ಇಂದಿನಿಂದ ರಾತ್ರಿ ಕರ್ಫ್ಯೂ ಸಹಿತ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ದಾಯಗೊಳಿಸಿದೆ
ವರದಿ ಮೂಲ : ಕಲೀಜ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ