DUBAI DASARA SPORTS FESTIVAL-2018 ಅಬುಧಾಬಿ : 31-10-2018

ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬಹುಪಾಲು ಅನಿವಾಸಿ ಕನ್ನಡಿಗರು ಕೇಳಿದ್ದಾರೆ ಹೊರತು ಹೆಚ್ಚಿನವರಿಗೆ ನೋಡಲು ಸಮಯ ಸಂದರ್ಭ ಕೂಡಿ ಬರುದಿಲ್ಲ , ನಾಡ ಹಬ್ಬ ಮೈಸೂರು ದಸರಾ ಉತ್ಸವದ ಒಂದು ಸಣ್ಣ ಮೇಲುಕನ್ನು ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಕನ್ನಡ ನಾಡಿನ ಮುದ್ದು ಮಕ್ಕಳಿಗೆ ನಾಡ ಹಬ್ಬದ ಬಗ್ಗೆ ನೆನಪನ್ನು ಮಾಡಿಸಲು ಯುಎಇ ಹೆಮ್ಮೆಯ ಕನ್ನಡಿಗರು ವಾಟ್ಸಾಪ್ ಗ್ರೂಪ್ ಸದಸ್ಯರು ದುಬೈಯಲ್ಲಿ ಯುಎಇ ದಸರಾ ಕ್ರೀಡಾಕೂಟ ಎಂಬ ಕಾರ್ಯಕ್ರಮವನ್ನು ಇದೆ ತಿಂಗಳ ನೇ ತಾರೀಖಿನಂದು ಅಲ್ ಬರ್ಶದಲ್ಲಿರುವ ಜುಮೇರಾ ವಿಲೇಜ್ ಸರ್ಕಲಿನಲ್ಲಿನ ಜೆ ಎಸ್ ಎಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಿ ಅದ್ದೂರಿಯಾಗಿ ದಸರಾ ಹಬ್ಬವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳನ್ನು ಹೊಂದಿರುವ ಮಾಯಾನಗರಿ ದುಬೈ ನಗರದ ಜುಮೇರಾ ವಿಲೇಜ್ ಸರ್ಕಲಿನಲ್ಲಿರುವ ಜೆ ಎಸ್ ಎಸ್ ಅಂತಾರಾಷ್ಟ್ರೀಯ ಶಾಲಾ ಒಳ ಮತ್ತು ಹೊರ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಂದು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡರು.

ಕಾರ್ಯಕ್ರಮವು ಬೆಳಿಗ್ಗೆ 8.30ಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆಗೊಂಡಿತ್ತು , ದೀಪವನ್ನು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ( ಸಿಇಒ ) ಡಾ. ಶಿವಕುಮಾರ್ ಅವರು ಬೆಳಗಿಸಿ ಕಾಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು , ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ವೀರೇಂದ್ರ ಬಾಬು , ದುಬಾಯಿ ಕನ್ನಡ ಪಾಠಶಾಲೆ ಮುಖ್ಯಸ್ಥರಾದ ಶ್ರೀಯುತ ಶಶಿಧರ್ ನಾಗರಾಜಪ್ಪ, ಬಸವ ಸಮಿತಿ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಲಿಂಬಳ್ಳಿ, ಅಲ್ ಸರಾಯ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಸತೀಶ್ ಹೈನ್ದರ್ ,ಜೆ ಎಸ್ ಎಸ್ ದುಬೈ ಶಾಲೆಯ ಅಧಿಕಾರಿಗಳಾದ ಶ್ರೀಯುತ ಅಶೋಕ್ ಮತ್ತಿತರರು ಹಾಜರಿದ್ದರು .
ಇದೇ ಸಂದರ್ಭ ದುಬೈ ದಸರಾ ಕ್ರೀಡಾಕೂಟ ವ್ಯವಸ್ಥಾಪಕ ಸಮಿತಿ ಸದಸ್ಯರುಗಳಾದ ಶ್ರೀ ರಫಿಕ್ ಅಲಿ ಕೊಡಗು, ಶ್ರೀಮತಿ ಶ್ವೇತಾ ಮೈಲಾರ್ ಮತ್ತು ಶ್ರೀ ಸುದೀಪ್ ಪರಂಗಿ ದಾವಣಗೆರೆ, ಶ್ರೀಮತಿ ಸೌಮ್ಯ ಮತ್ತು ವೆಂಕಟೇಶ್ ಮೇಲುಕೋಟೆ , ಶ್ರೀಮತಿ ಪಲ್ಲವಿ ಮತ್ತು ಶ್ರೀ ಬಸವರಾಜ್ ಜೋಗಪ್ಪನವರ್ ದಾವಣಗೆರೆ, ಶ್ರೀಮತಿ ಮಮತಾ ಮತ್ತು ಶ್ರೀ ಸೆಂಥಿಲ್ ಬೆಂಗಳೂರು, ಶ್ರೀಮತಿ ಮಮತಾ ಮತ್ತು ಶ್ರೀ ರಾಘವೇಂದ್ರ ಮನ್ಬೋಲ್ ಬೆಂಗಳೂರು, ಶ್ರೀಮತಿ ಅನಿತಾ ಮತ್ತು ಶ್ರೀ ರಾಮ್ ಬೆಂಗಳೂರು, ಶ್ರೀಮತಿ ಸ್ವಪ್ನ ಮತ್ತು ಶ್ರೀ ಶಶಿಧರ್ ಮುಂಡರಗಿ ದಾವಣಗೆರೆ, ಶ್ರೀಮತಿ ವೀಣಾ ಮತ್ತು ಶ್ರೀ ಮಧು ಗೌಡರ್ ದಾವಣಗೆರೆ, ಶ್ರೀ ವಿಷ್ಣುಮೂರ್ತಿ ಮೈಸೂರು, ಶ್ರೀಮತಿ ಸಯೀದಾ ಯಸ್ ಕೆ ಝೆನಿಯ ಮತ್ತು ಶ್ರೀ ಮುಹಮ್ಮೆದ್ ಬೆಂಗಳೂರು, ಶ್ರೀಮತಿ ಸಿರಿ ರೇಣುಕಾನಂದ ಮತ್ತು ಶ್ರೀ ಯೋಗೇಶ್ ಸೊಪ್ಪಿನ್, ದಾವಣಗೆರೆ, ಶ್ರೀಮತಿ ಶೀಲಾ ಮತ್ತು ಮೊಣ್ಣಪ್ಪ ಕೊಡಗು, ಶ್ರೀಮತಿ ಹಾದಿಯ ಮಂಡ್ಯ, ಶ್ರೀ ಅಲಾನ್ ಮೆಂಡೋನ್ಸಾ ಮಂಗಳೂರು , ಶ್ರೀಮತಿ ಜಯಶ್ರೀ ಮತ್ತು ಶ್ರೀ ಸಂತೋಷ್ ಶೆಟ್ಟಿ ಮಂಗಳೂರು, ಶ್ರೀಮತಿ ಮೈತ್ರಿ ಮತ್ತು ಶ್ರೀ ರವೀಂದ್ರ ಪೈ ಉಡುಪಿ, ಶ್ರೀ ವಿರುಪಾಕ್ಷ ನಾಗಠಾಣ ಧಾರವಾಡ, ಶ್ರೀಮತಿ ಅನುರಾಧ ಮತ್ತು ಶ್ರೀ ಸತೀಶ್ ಮಾಸುರ್ ಧಾರವಾಡ , ಶ್ರೀ ಲೈನಾಲ್ ಮೊಂಟೆರಿಯೋ ಮಂಗಳೂರು , ಶ್ರೀಮತಿ ಸವಿತಾ ಮತ್ತು ಶ್ರೀ ಮೋಹನ್ ಕುದೂರ್ , ಶ್ರೀ ಕಿರಣ್ ಸಣ್ಣಕಿ ದಾವಣಗೆರೆ, ಶ್ರೀ ಅಮೃತ್ ಬಾಬು ದಾವಣಗೆರೆ ಮುಂತಾದವರು ಹಾಜರಿದ್ದರು.

ದಸರಾ ಕ್ರೀಡಾಕೂಟದ ಅಂಗವಾಗಿ ಮಕ್ಕಳ ವಿಭಾಗಕ್ಕೆ ಲಾಂಗ್ ಜಂಪ್, ಮ್ಯೂಸಿಕಲ್ ಚೇರ್, ಪಾಸಿಂಗ್ ದಿ ರಿಂಗ್, ಫ್ರಾಗ್ ಜಂಪ್, ರನ್ನಿಂಗ್ ರೇಸ್, ಲೆಮನ್ ಅಂಡ್ ಸ್ಪೂನ್ ಮುಂತಾದ ಹಲವು ಆಟೋಟಗಳು ಇದ್ದವು , ಹಾಗೆ ಕನ್ನಡತಿಯರಿಗೆ ಮ್ಯೂಸಿಕಲ್ ಚೇರ್, ಟಗ್ ಆಫ್ ವಾರ್, ಥ್ರೋ ಬಾಲ್ , ಪಾಸಿಂಗ್ ದಿ ರಿಂಗ್, ಬ್ಯಾಡ್ಮಿಂಟನ್, ರಂಗೋಲಿ, ರನ್ನಿಂಗ್ ರೇಸ್ ಮುಂತಾದ ಆಟೋಟಗಳು ಇದ್ದವು, ಮತ್ತು ಪುರುಷ ವಿಭಾಗಕ್ಕೆ ಟಗ್ ಆ ವಾರ್ , ಥ್ರೋ ಬಾಲ್, ಲಾಂಗ್ ಜಂಪ್, ರನ್ನಿಂಗ್ ರೇಸ್ ಬ್ಯಾಡ್ಮಿಂಟನ್ ಮುಂತಾದ ಆಟೋಟಗಳು ಏರ್ಪಡಿಸಿದ್ದರು , ಕನ್ನಡ ನಾಡಿನ ನಾನಾ ಬಾಗದ ಅನಿವಾಸಿ ಕನ್ನಡಿಗರು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಕಡೆಗಳಿಂದ ಆರುನೂರಕ್ಕಿಂತಲೂ ಹೆಚ್ಚು ಕನ್ನಡಿಗ ಕ್ರೀಡಾಪಟುಗಳು ಪಾಲ್ಗೊಂಡು ಸಂತೋಷದಿಂದ ಸಂಭ್ರಮಿಸಿದರು.
ಈ ಒಂದು ಸುಂದರ ಕಾರ್ಯಕ್ರಮಕ್ಕೆ ಕನ್ನಡ ನಾಡಿನ ಹಲವು ಜನ ನಾಯಕರು , ಸಾಮಾಜಿಕ ನೇತಾರರು , ಸಂಘ ಸಂಸ್ಥೆಗಳ ನಾಯಕರುಗಳು ಹಾಗೆ ಯುಎಇ ದೇಶದಲ್ಲಿ ವ್ಯವಹಾರ ಕ್ಷೇತ್ರದಲ್ಲಿನ ಹಲವು ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು , ಸಮಾರೋಪ ಸಮಾರಂಭ ಮತ್ತು ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಅಲ್ ಸಮಿಯೇರ್ ಎಲೆಕ್ಟ್ರಿಕಲ್ ಗ್ರೂಪ್ ಮುಖ್ಯಸ್ಥರಾದ ಶ್ರೀ ಸುರೇಶ್ ಗಾಂಧಿ, ಪಾನ್ ವರ್ಲ್ಡ್ ಎಜುಕೇಶನ್ ಮುಖ್ಯಸ್ಥರಾದ ಬಹು : ರಾಘವೇಂದ್ರ ಮನ್ಬೋಲ್ , ಬಹು : ಪ್ರಿಸಿಶನ್ ಎಕ್ಲೇಕ್ರಿಕೆಲ್ಸ್ ಕೋ ಮುಖ್ಯಸ್ಥರು , ಅಲ್ ಸರಾಯ ಎಂಜಿನೀರಿಂಗ್ ಕನ್ಸಲ್ಟೆಂಟ್ ಬಹು : ಸತೀಶ್ ಹೈನ್ದರ್ ,ಡಾ .ಮಮತಾ ರೆಡ್ಡಾರ್, ಎಮ್ ಸ್ಕ್ವೇರ್ ಎಂಜಿನೀರಿಂಗ್ ಮಾಲಿಕರಾದ ಬಹು : ಮುಸ್ತಫಾ ಮತ್ತು ಶ್ರೀಮತಿ ಮುಸ್ತಫಾ, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷ ಬಹು : ಮಲ್ಲಿಕಾರ್ಜುನ ಗೌಡ, ಕನ್ನಡ ಪಾಠ ಶಾಲೆ ಮುಖ್ಯಸ್ಥರಾದ ಬಹು : ಶಶಿಧರ್ ನಾಗರಾಜಪ್ಪ, ಬಹು : ನೋಯೆಲ್ , ಜೆ ಎಸ್ ಎಸ್ ಶಾಲೆಯ ಮುಖ್ಯಸ್ಥರಾದ ಬಹು : ಅಶೋಕ್ , ಜೆ ಎಸ್ ಎಸ್ ಶಾಲೆಯ ದೈಹಿಕ ಶಿಕ್ಷಕರಾದ ಬಹು : ಬಾಬನ್ ಮ್ಯಾಥ್ಯು, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾದರ್ , ಜೆ ಎಸ್ ಎಸ್ ಶಾಲೆಯ ದೈಹಿಕ ಶಿಕ್ಷಕರಾದ ಬಹು : ಮೊಣ್ಣಪ್ಪ ಮುಂತಾದವರು ವಿಜೇತರುಗಳಿಗೆ ಸನ್ಮಾನ ಹಸ್ತಾಂತರಿಸಿದರು. ಕೊನೆಯಲ್ಲಿ ಆಗಮಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಿದರು .video link https://www.youtube.com/watch?v=6qSzKwgWwUQ

Comment here

This site uses Akismet to reduce spam. Learn how your comment data is processed.

Next Post

Job Fair/Guidence Program 2019 ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ : 27.04.2019

Thu Nov 26 , 2020
ಸಂಯುಕ್ತ ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ಸಾವಿರಾರು ಯುವಕ ಯುವತಿಯರಿಗೆ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು-ದುಬೈ ಇವರು ಇಂಟರ್ವ್ಯೂ ಗೈಡೆನ್ಸ್ ಮತ್ತು ಜಾಬ್ ಫೇರ್ -2019 ಎಂಬ ಕಾರ್ಯಗಾರ ಕಾರ್ಯಕ್ರಮವನ್ನು ಏಪ್ರಿಲ್ 26ರಂದು ಪರ್ಲ್ ಸಿಟಿ ಸೂಟ್ಸ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿತ್ತು , ಈ ಒಂದು […]