Dubai Dasara Sports Meet-2019 Teaser ದುಬೈ ದಸರಾ ಕ್ರೀಡೋತ್ಸವದ ವಿಡಿಯೋ ತುಣುಕು

ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಇಲ್ಲಿನ ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ದೂರದ ಅರಬರ ನಾಡು ದುಬೈನಲ್ಲಿ  ಅತೀ ವಿಜೃಂಭಣೆಯಿಂದ ಆಚರಿಸಿದರು  ಈ  ಕ್ರೀಡೋತ್ಸವನ್ನು ದಿನಾಂಕ ಅಕ್ಟೋಬರ್ 11 ರಂದು ಪ್ರತಿಷ್ಠಿತ ಎತಿಸಲಾತ್  ಸ್ಪೋರ್ಟ್ಸ್ ಅಕಾಡೆಮಿಯ ಬೆಳಿಗ್ಗೆ 8ರಿಂದ ಒಳ ಮತ್ತು ಹೊರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದರು.  ಈ ಕ್ರೀಡಾಕೂಟದಲ್ಲಿ  ಮಹಿಳೆಯರಿಗೆ ಮತ್ತು ಪುರುಷರಿಗೆ  ದಸರಾ ಕಪ್

ಕ್ರಿಕೆಟ್, ಕಬಡ್ಡಿ, ಕಾಲ್ಚೆಂಡು, ವಾಲಿಬಾಲ್, ಥ್ರೋ ಬಾಲ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಮುಂತಾದ ಪಂದ್ಯಾವಳಿಗಳನ್ನು, ಪುಟ್ಟ ಮಕ್ಕಳಿಗಾಗಿ ಲೆಮನ್ ಅಂಡ್ ಸ್ಪೂನ್ , ಮ್ಯೂಸಿಕಲ್ ಚೇರ್ , ಫ್ರಾಗ್ ರೇಸ್ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಅಲ್ಲದೆ ಮಹಿಳೆಯರಿಗೆ ಥ್ರೋ ಬಾಲ್, ಕೋಕೋ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಮ್ಯೂಸಿಕಲ್ ಚೇರ್ ಮತ್ತು ಪಾಸಿಂಗ್ ದಿ ರಿಂಗ್ ಆಟಗಳನ್ನು ಆಯೋಜಿಸಲಾಗಿತ್ತು. ಅದಲ್ಲದೆ ಸಾಂಪ್ರದಾಯಿಕ ದಸರಾ ಗೊಂಬೆ ಸ್ಪರ್ಧೆ ಹಾಗು ರಂಗೋಲಿ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಕನ್ನಡಿಗ ಸ್ಪರ್ಧಾಳುಗಳಿಗೆ ಮಾತ್ರ ಮೀಸಲಿಟ್ಟಿತ್ತು,  ಸಾಗರದಾಚೆ ದಿನವಿಡೀ ಕನ್ನಡ ಶಬ್ದ ತರಂಗಗಳು ಮೊಳಗಿತು .  ಸುಮಾರು 3000ಕ್ಕೂ ಹೆಚ್ಚಿನ ಕನ್ನಡಿಗರು ಭಾಗವಹಿಸಿದ್ದ ಈ ಕೂಟದಲ್ಲಿ ದೇಶದ ವಿವಿಧ ಎಮಿರೇಟುಗಳ ಮೂಲೆ ಮೂಲೆಗಳ ಕ್ರೀಡಾಪ್ರೇಮಿಗಳು ಆಗಮಿಸಿ , ಕೀಡಾಪಟುಗಳನ್ನು ಹುರಿದುಂಬಿಸಿ ಚಿನ್ನದ ,ಬೆಳ್ಳಿಯ , ಕಂಚಿನ ಪದಕಗಳು ಹಾಗು ಟೀಮ್ ಟ್ರೋಫಿ ಗಳನ್ನೂ ಪಡೆಯಲು ಪ್ರೋತ್ಸಾಹಿಸಿದರು. ಖ್ಯಾತ ಒಲಂಪಿಕ್ ಕ್ರೀಡಾತಾರೆ, ಅಂತಾರಾಷ್ಟ್ರೀಯ ಓಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ ಕನ್ನಡಿಗರ ಹೆಮ್ಮೆಯ ಕನ್ನಡತಿ ಶ್ರೀಮತಿ ಅಶ್ವಿನಿ ನಾಚಪ್ಪ ಅವರು ಈ ಕ್ರೀಡಾ ಮಹೋತ್ಸವವನ್ನು ದುಬೈ ದಸರಾ ಪ್ರವೇಶ ದ್ವಾರ ಉಧ್ಘಾಟಿಸಿ ಕ್ರೀಡೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು. ತದನಂತರ ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಶ್ರೀಯುತ ಮೊಹಮ್ಮದ್  ಮುಸ್ತಫಾ ಹಾಗೂ ಆಗಮಿಸದ ಸಾವಿರಾರು ಜನರು ಮಕ್ಕಳು ಸೇರಿ ಕನ್ನಡ ಧ್ವಜ , ಭಾರತ ಧ್ವಜ , ಯುಎಇ ದೇಶದ ಧ್ವಜ ಮತ್ತು ಕ್ರೀಡಾ ಜ್ಯೋತಿಯನ್ನು  ಹಿಡಿದು ಚಂಡೆ ಮೇಳದೊಂದಿಗೆ ಮಾರ್ಚ್ ಫಾಸ್ಟ್ ಮಾಡಿದರು. ಈ ಸಂದರ್ಭದಲ್ಲಿ ಕ್ರೀಡಾಕೂಟ ಆಯೋಜಕರಾದ  ಹೆಮ್ಮೆಯ  ಯುಏಇ ಕನ್ನಡಿಗರು ದುಬೈ ಕುಟುಂಬ ಸದಸ್ಯರುಗಳಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಶಶಿಧರ್, ಸೆಂತಿಲ್ ಬೆಂಗಳೂರು, ಮಧು ದಾವಣಗೆರೆ,  ಮಮತಾ  ಮೈಸೂರು , ಮಮತಾ ಶಾರ್ಜಾ , ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ವಿಷ್ಣುಮೂರ್ತಿ ಮೈಸೂರು, ವೆಂಕಟೇಶ್ ಮೇಲುಕೋಟೆ ಅವರುಗಳು  ಹಾಜರಿದ್ದರು. ಪ್ರಸ್ತುತ ದುಬೈಯ ಬ್ಯಾಂಕ್ ಉದ್ಯೋಗದಲ್ಲಿರುವ ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕಿ ಪೂಜಾ ಹಾಸನ ಮತ್ತು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ವಾಲಿಬಾಲ್ ತಂಡದ ಮಾಜಿ ನಾಯಕಿ ಮತ್ತು ಭಾರತ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಡಾಕ್ಟರ್ ಕವಿತಾ ಅವರನ್ನು ಕ್ರೀಡೆಯಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು , ಅದೇ ರೀತಿಯಲ್ಲಿ ಹೆಮ್ಮೆಯ ಯುಎಇ ಕನ್ನಡಿಗರು, ದುಬೈ ಕುಟುಂಬ ದುಬೈ ದಸರಾ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ವರ್ಷಗಳಲ್ಲಿ ಕ್ರೀಡೆಯಲ್ಲಿ ಕರ್ನಾಟಕದ ಹೆಸರನ್ನು ಬೆಳಗಿಸಿದ ಕ್ರೀಡಾಪಟುಗಳನ್ನು ತಾಯಿನಾಡಿನಿಂದ ಆಹ್ವಾನಿಸಿ  ನೀಡುವ ” ಕ್ರೀಡಾ ರತ್ನ ಪ್ರಶಸ್ತಿಯನ್ನು” ಈ ಬಾರಿ ಖ್ಯಾತ ಒಲಂಪಿಕ್ ಕ್ರೀಡಾತಾರೆ, ಅಂತಾರಾಷ್ಟ್ರೀಯ ಓಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ ಕೊಡಗಿನ ಪುಚ್ಛಿಮಂಡ ಮನೆತನದ ಶ್ರೀಮತಿ ಅಶ್ವಿನಿ ನಾಚಪ್ಪ ಅವರಿಗೆ ನೀಡಿ ಗೌರವಿಸಲಾಯಿಯಿತು. ಕರ್ನಾಟಕ ನಾಡ ಗೀತೆ, ಭಾರತ ರಾಷ್ಟ್ರಗೀತೆ  ಮತ್ತು ಇಲ್ಲಿನ ದೇಶದ ರಾಷ್ಟ್ರ ಗೀತೆ ಹಾಡುದರ ಮೂಲಕ ಮುಕ್ತಾಯ ಸಮಾರಂಭವನ್ನು ಪ್ರಾಂಭಿಸಿ ವಿವಿಧ ರೀತಿಯ ಆಟೋಟಗಳಲ್ಲಿ ಗೆದ್ದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಪಾರಿತೋಷಕಗಳನ್ನು ಆಗಮಿಸಿದ ಗಣ್ಯರು ಮತ್ತು ಸಂಘಟಕಾ ಸಮಿತಿ ಸದಸ್ಯರು ನೀಡಿ ಗೌರವಿಸಿ ದರು, ಈ ಸಂದರ್ಭದಲ್ಲಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಶ್ರೀಯುತ ಮೊಹಮ್ಮದ್  ಮುಸ್ತಫಾ, ಅರಬ್ ನಾಗರಿಕ  ಹಿಸ್ ಎಕ್ಸಲನ್ಸಿ ಶೇಕ್ ಬು ಅಬ್ದುಲ್ಲಾ ಬಿನ್ ಅಬ್ದುಲ್ಲಾ , ಕ್ಯಾಪ್ರಿಸ್ ಸಿಇಓ ಎಮ್ ಎಸ್ ಖಾನ್, ಝೈನ್ ಇಂಟೆರ್ನ್ಯಾಷನಲ್ ಹೋಟೆಲ್ ಮಾಲಿಕರಾದ ಶ್ರೀಯುತ ಝಫರುಲ್ಲಾ ಖಾನ್ ಮಂಡ್ಯ,ಫಾರ್ಚ್ಯೂನ್ ಗ್ರೂಪ್ ಆ ಹೋಟೆಲ್ಸ್ ಎಂಡಿ ಶ್ರೀಯುತ ಪ್ರವೀಣ್ ಶೆಟ್ಟಿ, ರೇವಾ ಮೆಡಿಕಲ್ ಸೆಂಟರ್ ಮಾಲೀಕರಾದ ಡಾ. ರಶ್ಮಿ, ಶ್ರೀಯುತ ಮೋಹನ್ ಉಪ್ಪಿನ್, ಡಾ.ಗುರುಮಾದವ ರಾವ್, ಶ್ರೀಯುತ ಚೇತನ್, ಮತ್ತು ಶ್ರೀಯುತ ಶೇಖರ್ ರೆಡ್ಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು, ಹಾಗು  ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಗೌಡ, ಬಸವ ಸಮಿತಿ ಅಧ್ಯಕ್ಷರಾದ ಶ್ರೀಯುತ ಸತೀಶ್ ಶಿಂದರ್ ಮತ್ತು ಇತರ ಸಾಮಾಜಿಕ, ಧಾರ್ಮಿಕ ಗಣ್ಯರು ಅತಿಥಿಗಳಾಗಿ ಆಗಮಿಸಿ ಶುಭ  ಕೋರಿ ಕ್ರೀಡಾಪಟುಗಳಿಗೆ  ಆತ್ಮ ವಿಶ್ವಾಸ ತುಂಬಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ  ದುಬೈ ಕನ್ನಡಿಗರ ನಡುವೆ ಇದ್ದು ಬಹಳ ಉತ್ಸಾಹದಿಂದ  ತಾಯಿನಾಡಿನಿಂದ ಆಗಮಿಸಿದ ಟಿವಿ ನಿರೂಪಕಿ ಶೃತಿ ಅವರು ನೆರವೇರಿಸಿಕೊಟ್ಟು ಪಾಲ್ಗೊಂಡ ಸರ್ವರ ಮೆಚ್ಚುಗೆಗೆ ಪಾತ್ರರಾದರು. ಈ ಒಂದು ಕ್ರೀಡಾಕೂಟದಲ್ಲಿ ವಿಜೇತರಿಗೆ 350ಮೆಡಲ್, ಪ್ರಮಾಣ ಪತ್ರ ಮತ್ತು 85 ಟ್ರೋಫಿ ವಿತರಿಸಲಾಯಿತ್ತು. ಮಮತಾ ರಾಘವೇಂದ್ರ ಮೈಸೂರು ಮತ್ತು ವಿಷ್ಣುಮೂರ್ತಿ ಮೈಸೂರು ಅವರು ಪಾಲ್ಗೊಂಡ ಸ್ಪರ್ಧಾಳುಗಳಿಗೆ, ಬಾಗವಹಿಸಿದ ಸರ್ವರಿಗೂ ಮತ್ತು ಎಲ್ಲಾ ಗಣ್ಯರಿಗೂ  ಹಾಗೆ ಕಾರ್ಯಕ್ರಮ ಯಶಸ್ವಿಯಾಗಲು ಬೆನ್ನೆಲುಬಾಗಿ ನಿಂತ ಇತರ ಆಯೋಜಕ ಉಪಸಮಿತಿ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಾರಂಭವನ್ನು ಮುಕ್ತಾಯಗೊಳಿಸಿದರು.  DUBAI DASARA SPORTS MEET SUCCESSFULLY ENDED WITH SUPPORTING TO YEAR OF TOLERANCE also Supported  Dubai Fitness Challenge The world famous Mysuru Dasara, the Indian Heritage Ten days festival just concluded its 409th edition in all its splendor & grandeur to Support Dubai Ruler His highness Sheikh Hamdan Bin Mohammad Bin Makthoum called Dubai Fitness Challenge . also this sports event helped to unite all religion Kannadigas and strengthen to United Arab Emirates Rulers Announced 2019 as Year of Tolerance   The Indian expats ‘Hemmeya UAE Kannadigaru Dubai family’  organized a similar cultural, heritage & sporting event  in the heart of Dubai with Dasara Doll competition, Rangoli, Dasara cup cricket Tournament, along with the final showdown event of Athletics, Badminton, Throwball, Volleyball, Kabaddi, Football held at the prestigious Etisalat sports academy Dubai on 11th October

Comment here

This site uses Akismet to reduce spam. Learn how your comment data is processed.

Next Post

UAE Kannada Kids Talent Competition - 2019 Dubai

Sat Nov 28 , 2020
ಹೆಮ್ಮೆಯ ಯುಎಇ ಕನ್ನಡಿಗರು -ದುಬೈ ವತಿಯಿಂದ ಗಣರಾಜ್ಯೋತ್ಸವ, ಕ್ರಿಸ್ಮಸ್ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಯುಎಇ ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ದಿನಾಂಕ : 8.01.19 ಸ್ಥಳ : ಇರಾನಿಯನ್ ಕ್ಲಬ್ ಸಭಾಂಗಣ