Job Fair/Guidence Program 2019 ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ : 27.04.2019

ಸಂಯುಕ್ತ ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ಸಾವಿರಾರು ಯುವಕ ಯುವತಿಯರಿಗೆ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು-ದುಬೈ ಇವರು ಇಂಟರ್ವ್ಯೂ ಗೈಡೆನ್ಸ್ ಮತ್ತು ಜಾಬ್ ಫೇರ್ -2019 ಎಂಬ ಕಾರ್ಯಗಾರ ಕಾರ್ಯಕ್ರಮವನ್ನು ಏಪ್ರಿಲ್ 26ರಂದು ಪರ್ಲ್ ಸಿಟಿ ಸೂಟ್ಸ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿತ್ತು , ಈ ಒಂದು ಕಾರ್ಯಕ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಎಮಿರೇಟುಗಳಿಂದ ನೂರಕ್ಕಿಂತಲೂ ಹೆಚ್ಚು ಕೆಲಸ ಹುಡುಕಲು ಬಂದ ಕನ್ನಡಿಗ ಜನರು ಪಾಲ್ಗೊಂಡು ನುರಿತ ತರಬೇತುದಾರರಿಂದ ಜಾಬ್ ಇಂಟರ್ವ್ಯೂ ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ಹತ್ತು ಹಲವು ವಿಷಯದ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ಪಡೆದುಕೊಂಡರು.
ಜಾಬ್ ಗೈಡೆನ್ಸ್ ಟಿಪ್ಸ್ ನೀಡಲು ಸ್ವ ಇಚ್ಚೆಯಿಂದ ಬಂದ ತರಬೇತುದಾರಾದ ಶ್ರೀಮತಿ:ರಾಧಾ ಜೀವನ್ ಮುದಿಗೌಡೆರ್ ( ಸೀನಿಯರ್ ಎಚ್ ಆರ್ ಸ್ಪೆಷಲಿಸ್ಟ್/ಕನ್ಸಲ್ಟೆಂಟ್), ಶ್ರೀ ರಾಘವೇಂದ್ರ ಗಾಣಿಗ ( ಹೆಡ್ ಆಫ್ ಎಚ್ ಆರ್, ಸೀನಿಯರ್ ಎಚ್ ಆರ್ ಬಿಸಿನೆಸ್ ಪಾರ್ಟ್ನರ್,ಸೀನಿಯರ್ ಟ್ಯಾಲೆಂಟ್ ಅಕ್ಯೂಸಿಷನ್) ಮತ್ತು ಶ್ರೀ ರಘು ನಾಡಕರ್ಣಿ (ಸೀನಿಯರ್ ಮ್ಯಾನೇಜರ್-ಬ್ಯುಸಿನೆಸ್ ಡೆವಲಪ್ಮೆಂಟ್, ಅಪರೇಷನ್ಸ್ ಅಂಡ್ ಟ್ರೇನಿಂಗ್ ) ಆಗಮಿಸಿದ ಕೆಲಸ ಹುಡುಕುವರಿಗೆ ಪ್ರೊಜೆಕ್ಟರ್ ಮುಂತಾದ ಸಲಕರಣೆ ಉಪಯೋಗಿಸಿ ಬಹಳ ಉತ್ತಮ ರೀತಿಯಲ್ಲಿ ಮನಸ್ಸಿನಲ್ಲಿ ನಾಟುವ ಹಾಗೆ ಸಿ ವಿ ಹೇಗೆ ಇರಬೇಕು, ಸಂದರ್ಶನ ಹೇಗೆ ಎದುರಿಸಬೇಕು, ಯಾವ ಯಾವ ಕಡೆಗಳಲ್ಲಿ ಕೆಲಸಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಇತ್ಯಾದಿ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಇನ್ನೊಂದು ಭಾಗವಾದ ಜಾಬ್ ಫೇರ್-2019 ರಲ್ಲಿ ರಿಕ್ರೂಟರ್ ಶ್ರೀ ಪ್ರಸನ್ನಾ ಮತ್ತು ಟೋನಿ ಮತ್ತು ಬೇರೆ ಕನ್ನಡಿಗ ವ್ಯಾಪರಸ್ಥರು ತಮ್ಮ ಕಂಪನಿಗಳಿಗೆ 16ಕ್ಕಿಂತಲೂ ಹೆಚ್ಚು ಕನ್ನಡಿಗರಿಗೆ ಸ್ಥಳದಲ್ಲೇ ಜಾಬ್ ಆಫರ್ ನೀಡಿದಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಕೆಲಸಕೊಡಿಸುವ ಭರವಸೆಯನ್ನು ನೀಡಿದರು .
ಕಾರ್ಯಕ್ರಮದ ಮೊದಲು ಬಂದ ಗಣ್ಯರನ್ನು ಹೆಮ್ಮೆಯ ಕನ್ನಡಿಗರು ದುಬೈ ಕುಟುಂಬ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು ಅವರು ಹಾರ್ಧಿಕವಾಗಿ ಸ್ವಾಗತ ಕೋರಿ ಬರಮಾಡಿಕೊಂಡರು, ನಂತರ ಹೆಮ್ಮೆಯ ಕನ್ನಡಿಗರು ದುಬೈ ಕುಟುಂಬ ಸದಸ್ಯರಾದ ಸುದೀಪ್ ದಾವಣಗೆರೆ ಅವರು ಈ ಒಂದು ಕಾರ್ಯಕ್ರಮದ ಉದ್ದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು, ಕಾರ್ಯಕ್ರಮದ ಕೊನೆಯಲ್ಲಿ ಹೆಮ್ಮೆಯ ಕನ್ನಡಿಗರು ದುಬೈ ಕುಟುಂಬ ಸದಸ್ಯರಾದ ರಫೀಕಲಿ ಕೊಡಗು ಅವರು ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ವಂದನಾರ್ಪಣೆ ಮಾಡಿದರು ಅದು ಅಲ್ಲದೆ ಹೆಮ್ಮೆಯ ಯುಎಇ ಕನ್ನಡಿಗರು – ದುಬೈ ಅಧಿಕೃತ ವೆಬ್ಸೈಟ್ ಆದ www.dubaikannadigaru.com ಬಗ್ಗೆ ಕೂಲಂಕುಷವಾಗಿ ವಿವರಿಸಿದರು, ಈ ವೆಬ್ಸೈಟಿನಲ್ಲಿ ಯುಎಇ ಯಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಕನ್ನಡಿಗ ವ್ಯಾಪಾರಸ್ಥ ಕಂಪೆನಿಗಳ ಬಗ್ಗೆ ಮಾಹಿತಿ, ಕೆಲಸ ಹುಡುಕಿ ಬಂದ ಕನ್ನಡಿಗರಿಗೆ ಕೆಲಸಗಳ ಬಗ್ಗೆ ಮಾಹಿತಿ, ಎಲ್ಲಿಯಾದರೂ ಕೆಲಸ ಇದ್ದರೆ ನೇರವಾಗಿ ವೆಬ್ಸೈಟಿನಲ್ಲಿ ತಿಳಿಸುವ ವ್ಯವಸ್ಥೆ, ಯುಎಇ ದೇಶದದಲ್ಲಿನ ದೈನಂದಿನ ವಾರ್ತೆ, ಲೇಖನ ಬರೆಯುವರಿಗೆ ತಮ್ಮ ಲೇಖನವನ್ನು ಆಕುವ ವ್ಯವಸ್ಥೆ, ಯುಎಇ ದೇಶದ ಬಗ್ಗೆ ವಾರ್ತೆ ಇತ್ಯಾಧಿ ಹಲವು ಉಪಯುಕ್ತ ಮಾಹಿತಿಗಳನ್ನು ಕನ್ನಡಿಗರಿಗಾಗಿ ಈ ಅಂತರ್ಜಾಲದಲ್ಲಿ ಒಳಗೊಂಡಿರುತ್ತೆ ಎಂದು ವಿವರಿಸಿದರು .
ಹೆಮ್ಮೆಯ ಕನ್ನಡಿಗರು ಕುಟುಂಬ ಸದಸ್ಯರಾದ ಸೆಂತಿಲ್ ಅವರು ಟೆಕ್ನಿಕಲ್ ಕೆಲಸ ಮಾಡಿದರೆ ಕುಟುಂಬ ಸದಸ್ಯರುಗಳಾದ ಮಧು, ಶಶಿಧರ್, ಪಲ್ಲವಿ, ಮಮತಾ ಮತ್ತು ಅನಿತಾ ಅವರು ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರವಹಿದರು. video link https://www.youtube.com/watch?v=5yHibgvv9rc

Comment here

This site uses Akismet to reduce spam. Learn how your comment data is processed.

Next Post

Dubai Kannadigas Celebrate Doctors Day ದುಬೈ ಕನ್ನಡಿಗರಿಂದ ಡಾಕ್ಟರ್ಸ್ ಡೇ ಆಚರಣೆ TV5 Kannada

Thu Nov 26 , 2020
KANNADA DOCTORS Getogether-DUBAI ದುಬೈಯಲ್ಲಿ ಜೂನ್ 28ಕ್ಕೆ ಕನ್ನಡ ಡಾಕ್ಟರುಗಳ ಸ್ನೇಹ ಮಿಲನ ಕಾರ್ಯಕ್ರಮ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳ ” ಯುಎಇ ಕನ್ನಡ ಡಾಕ್ಟರ್ಸ್ ಮೀಟ್ ಅಂಡ್ ಗ್ರೀಟ್” ಎಂಬ ಕಾರ್ಯಕ್ರಮವು ವೈದ್ಯ ದಿನಾಚರಣೆಯ ಪ್ರಯುಕ್ತ ನಡೆಯಲಿದ್ದು ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಎಮಿರೇಟುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಅರೋಗ್ಯ ಕ್ಷೇತ್ರದಲ್ಲಿ ಸೇವೆಗಯ್ಯುತ್ತಿರುವ ನೂರಾರು ಕನ್ನಡ ನಾಡಿನ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು […]