ಮಾನವೀಯತೆಯ ಕನ್ನಡ ಸೇವೆ ಮಾಡುತ್ತಿರುವ ಹೆಮ್ಮೆಯ ದುಬೈ ಕನ್ನಡತಿಯರು.

ಅಬುಧಾಬಿ : 10.08.2021

ಮೂಲತಃ ಬೆಂಗಳೂರಿನವರಾದ ಮಮತಾ ಶಾರ್ಜಾ ಮತ್ತು ಹಾದಿಯ ಮಂಡ್ಯ ಇವರ ಬಗ್ಗೆ ನೀವು ಹಲವು ಬಾರಿ ಕೇಳಿರಬಹುದು ನಮ್ಮ ಕಾರ್ಯಕ್ರಮ ಮತ್ತು ಪೋಸ್ಟುಗಳಲ್ಲಿ ನೋಡಿರಬಹುದು , ಅದಕ್ಕಿಂತ ಹೆಚ್ಚಾಗಿ ಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಸಹಾಯ ಮಾಡಲು ನಾನು ತೆರಳಿದ ಹಲವು ಸನ್ನಿವೇಶಗಳಲ್ಲಿ ನನ್ನ ಜೊತೆ ನೋಡಿರಬಹುದು.
ಅಪರಿಚಿತ ಅರಬರ ನಾಡಿನಲ್ಲಿ ಇದ್ದರೂ ಮಹಿಳೆಯರಾಗಿ ಮದ್ಯ ರಾತ್ರಿಯಲ್ಲೂ ಕಷ್ಟದಲ್ಲಿ ಸಿಲುಕಿದ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ಸಹಾಯ ಮಾಡಲು ಯಾವುದೇ ಸಂಕೋಚವಿಲ್ಲದೆ ಹೋಗುತ್ತಿದ್ದನ್ನು ಕಂಡು ನಾನಂತೂ ನನ್ನೊಳಗೆ ಹಲವು ಬಾರಿ ಹೆಮ್ಮೆ ಮತ್ತು ಸಂತಸ ವ್ಯಕ್ತಪಡಿಸಿದ್ದೇನೆ,

ಆಹಾರ ತಲುಪಿಸುವಲ್ಲಿ ಇವರ ಕಾಣಿಕೆ :
ಕೊರೋನಾ ಪ್ರಾರಂಭ ವರ್ಷದ ಸಮಯದಲ್ಲಿ ಊಟಕ್ಕೆ ಸಹ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ವಿದೇಶಿಗರು ಸೇರಿ ಹಲವು ಕನ್ನಡಿಗರಿಗೆ ರಾತ್ರಿ ಸಮಯದಲ್ಲೂ ಆಹಾರ ಸಾಮಗ್ರಿಗಳನ್ನು ತಲುಪಿಸಲು ನನ್ನೊಂದಿಗೆ ಬರುತ್ತಿದ್ದರು ಹಾಗೂ ನಮ್ಮ ತಂಡದವರ ಜೊತೆ ಸೇರಿ ಹಸಿದವರ ಹೊಟ್ಟೆ ತುಂಬಿಸಲು ಹೋಗುತ್ತಿದ್ದರು , ನಮಗೆ ಬರುತ್ತಿದ್ದ ಹಲವರ ಸಮಸ್ಯೆಗಳ ಕರೆಗಳಲ್ಲಿ ಮಹಿಳೆಯರದ್ದು ಮತ್ತು ಮಕ್ಕಳ ಕಷ್ಟದ ಬಗ್ಗೆ ಸಹ ಇರುತ್ತಿತ್ತು , ಆಗ ಈ ಇಬ್ಬರು ಆ ಮಹಿಳೆಯರಿಗೆ/ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಮಾಡಿ ದಿನಬಳಕೆ ವಸ್ತುಗಳನ್ನು ಸರಿಯಾಗಿ ತಲುಪಿಸುತ್ತಿದ್ದರು, ಕೋರೋನ ಸಮಯದಲ್ಲಿ ಹಾದಿಯ ಮಂಡ್ಯ ಅವರು ರಾತ್ರಿ 1ಗಂಟೆಗೆ ಒಂದು ಕನ್ನಡ ಕುಟುಂಬಕ್ಕೆ, ಮಗುವಿಗೆ ಸೇರಿ ಬೇಕಾದ ಎಲ್ಲಾ ವಸ್ತುಗಳನ್ನು ತಲುಪಿಸಿದ್ದರು ಹಾಗೆ ಮಮತಾ ಬೆಂಗಳೂರು ಅವರು ಸಹ ತನ್ನ ಪತಿಯೊಂದಿಗೆ ಸೇರಿ ರಾತ್ರಿ ಸಮಯದಲ್ಲೂ ಸಹ ಹಲವು ಸಹಾಯ ಮಾಡಿದ್ದಾರೆ.

ಮೋಸ ಹೋದ ಕನ್ನಡತಿಯರಿಗೆ ನೆರವು :
ಹಲವು ಕನ್ನಡತಿಯರು ಯಾವುದೋ ದಲ್ಲಾಳಿಗಳ ಮೂಲಕ ದುಬೈ ಬಂದು ತನ್ನ ಕುಟುಂಬಕ್ಕೆ ಶೋಭೆ ತರದ ಮತ್ತು ಮಾನಸಿಕವಾಗಿ ತಾನು ಮಾಡಲು ಇಚ್ಛಿಸದ ಹಲವು ಕೆಲಸಗಳಿಗೆ ಸೇರಿ ಮಾಡಬೇಕಾದ ಸನ್ನಿವೇಶ ಬಂದಾಗ ಹಾದಿಯ ಮತ್ತು ಮಮತಾ ಅವರು ನೇರವಾಗಿ ಅಂತಹ ಕನ್ನಡತಿಯರನ್ನು ಭೇಟಿಯಾಗಿ ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಿದ್ದಾರೆ ಹಾಗೂ ಇದೆ ರೀತಿ ಸಂಕಷ್ಟ ಬಲೆಗೆ ಸಿಲುಕಿದ್ದ ಕನ್ನಡತಿಯರನ್ನು ಸುರಕ್ಷಿತವಾಗಿ ದಾನಿಗಳ ಸಹಾಯದಿಂದ ತಾಯಿನಾಡು ಸೇರುವಂತೆ ಹಗಲಿರುಳು ಎನ್ನದೆ ಮಾನವೀಯತೆಯ ಕನ್ನಡ ಕೆಲಸಗಳನ್ನು ಮಾಡಿದ್ದಾರೆ.
ಕೆಲವು ತಿಂಗಳ ಹಿಂದೆ ನಿಮಗೆಲ್ಲ ಗೊತ್ತಿರುವ ಹಾಗೆ ಸುಳ್ಯ ಮೂಲದ ಯುವತಿ ದುಬೈಯಲ್ಲಿ ಕಳೆದ ಹಲವು ತಿಂಗಳಿಂದ ಕಾಣೆಯಾದ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಧ್ವನಿ ಮಾಡಿತ್ತು, ಆ ಯುವತಿಯ ಬಗ್ಗೆ ಮಾಹಿತಿ ಕಲೆ ಹಾಕಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಅಜ್ಮಾನ್ ಪ್ರದೇಶದಲ್ಲಿ ಯುವತಿಯನ್ನು ಭೇಟಿಯಾಗಲು ಹೋದಾಗ ಇದೆ ಹಾದಿಯ ಮಂಡ್ಯ ಮತ್ತು ಮಮತಾ ಶಾರ್ಜಾ ಅವರು ಇದ್ದರು , ಆ ಪ್ರದೇಶ ನಿಜವಾಗಲು ಅಷ್ಟು ಸುರಕ್ಷಿತ ಸ್ಥಳವಲ್ಲದೆ ಇದ್ದರೂ ಸಹ ನಮ್ಮ ತಂಡದ ಮಹಿಳಾ ಘಟಕದ ಸಂಚಾಲಕಿಯರಾದ ಮಮತಕ್ಕ ಹಾದಿಯ ಮೇಡಂ ಅವರು ಧೈರ್ಯ ಮಾಡಿ ರಾತ್ರಿಯಲ್ಲೇ ಹೋಗಿ ಭೇಟಿ ಮಾಡಿ ಕಾಣೆಯಾದ ಯುವತಿ ಸುರಕ್ಷಿವಾಗಿದ್ದಾಳೆ ಎಂದು ನಮ್ಮ ತಂಡದ ಅಧಿಕೃತ ಫೇಸ್ಬುಕ್ ಪುಟ ಮತ್ತು ವಾಟ್ಸಾಪ್ ಗ್ರೂಪುಗಳಲ್ಲಿ ತಿಳಿಸಿದ್ದೇವೆ, ಅದೇ ರೀತಿ ಅಲ್ ಕ್ವಾಸಿಸ್, ಅಲ್ ಕರಾಮ , ಬುರ್ ದುಬೈ , ಅಜ್ಮಾನ್ ಶಾರ್ಜಾ ಮುಂತಾದ ಹಲವು ಕಡೆಗಳಲ್ಲಿ ಮೋಸ ಹೋದ ಕನ್ನಡಿಯರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.

ರೀಪೆಟ್ರಿಯೇಷನ್ ವೇಳೆ ಇವರ ಸೇವೆ :
ಕೋವಿಡ್ ಸಮಯದಲ್ಲಿ ಭಾರತ ದೇಶ ವಿಮಾನ ಸೇವೆ ಸ್ಥಗಿತ ಗೊಳಿಸಿದಾಗ ದುಬೈಯಲ್ಲಿ ಕೆಲಸ ಕಳೆದುಕೊಂಡ ಕನ್ನಡಿಗರು, ಸಂದರ್ಶನ ವೀಸಾದಲ್ಲಿ ಬಂದು ಸಿಲುಕಿಕೊಂಡ ಕನ್ನಡಿಗರು, ಗರ್ಭಿಣಿಯರು, ರೋಗಿಗಳು, ವಯಸ್ಸಾದ ಹಿರಿಯರು ಮಕ್ಕಳು ಸೇರಿ ಹಲವು ತಿಂಗಳಿಂದ ತಾಯಿನಾಡಿಗೆ ಹೋಗಲು ಸಾಧ್ಯವಾಗದ ಸಮಯದಲ್ಲಿ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ ಸಂಕಷ್ಟದಲ್ಲಿದ್ದ ಕನ್ನಡಿಗರನ್ನು ತಾಯಿನಾಡು ತಲುಪಿಸಲು ವಿಶೇಷ ರೀಪೆಟ್ರಿಯೇಷನ್ ಚಾರ್ಟೆಡ್ ವಿಮಾನ ವ್ಯವಸ್ಥೆ ಮಾಡಿದಾಗ ಹಗಲು ಇರುಳು ಎಂಬ ವ್ಯತ್ಯಾಸವಿಲ್ಲದೆ ಜನರನ್ನು ವಿಮಾನ ನಿಲ್ದಾಣ ತಲುಪಿಸುವ ಕಾರ್ಯ ಸೇರಿ ಹಲವು ರೀತಿಯಲ್ಲಿ ಸೇವೆ ಮಾಡಿದ್ದರು.

ಇವರಂತ ಕನ್ನಡತಿಯರು ದೂರದ ದುಬೈ ಶಾರ್ಜಾದಲ್ಲಿ ನೆಲೆಸಿರುವುದರಿಂದ ಸಂಯುಕ್ತ ಅರಬ್ ಸಂಸ್ಥಾನದ ಕೆಲವು ಬಾಗದಲ್ಲಾದರೂ ಸಂಕಷ್ಟದಲ್ಲಿರುವ ಕೆಲವು ಕನ್ನಡತಿಯರಿಗೆ ಮತ್ತು ಮಕ್ಕಳಿಗಾದರು ಸಣ್ಣಪುಟ್ಟ ಸಹಾಯ ಮಾಡಲು ಹೆಮ್ಮೆಯ ದುಬೈ ಕನ್ನಡ ಸಂಘಕ್ಕೆ ಸಾಧ್ಯವಾಗುತ್ತಿದೆ. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಹೃದಯಾಳದ ಧನ್ಯವಾದಗಳು ಮತ್ತು ಸದಾ ನಿಮ್ಮ ಒಳಿತಿಗಾಗಿ ಪ್ರಾರ್ಥನೆಯೊಂದಿಗೆ.

ವರದಿ : ರಫೀಕಲಿ ದುಬೈ ಕನ್ನಡಿಗ

Comment here

This site uses Akismet to reduce spam. Learn how your comment data is processed.

Next Post

our team helping news

Thu Sep 30 , 2021