Team Dubai Hemmeya UAE Kannadigaru proudly organizing BLOOD DONATION CAMP on 03.12.2020

Team Dubai Hemmeya UAE Kannadigaru proudly organizing BLOOD DONATION CAMP on 03.12.2020 ( time 2pm to 8pm ) at Latifa Hospital Blood Bank on the Occasion of Kannada Rajyotsava & 49th United Arab Emirates National Day

Kindly be part of this Cause and hand-together to Save Life.. be a Blood Donor Hero

ಬನ್ನಿ ರಕ್ತಸಂಬಂಧಿಗಳಾಗೋಣ ಎಂಬ ದ್ಯೇಯ ಪದದೊಂದಿಗೆ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಇದೇ 3ನೇ ಡಿಸೆಂಬರ್ ಗುರುವಾರದಂದು ಕನ್ನಡ ರಾಜ್ಯೋತ್ಸವ🇧🇹 ಮತ್ತು ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನಾಚರಣೆ🇦🇪 ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಿದ್ದು ರಕ್ತದಾನ ಮಹಾದಾನ ಮಾಡಲು ತಮ್ಮೆಲ್ಲರನ್ನೂ ಕಳಕಳಿಯಿಂದ ಅಹವಾನಿಸುತ್ತಿದ್ದೇವೆ.

Bus Pick and Drop service available from nearest metro station
ಸಮೀಪದ ಮೆಟ್ರೋ ನಿಲ್ದಾಣದಿಂದ ಬಸ್ ಸೇವೆ ಇರುತ್ತೆ

ಸಂದರ್ಶನ ವೀಸಾದಲ್ಲಿ ಇರುವವರು ರಕ್ತ ಕೊಡಲು ಸಾಧ್ಯವಲ್ಲ.❌
ಎಮಿರೇಟ್ಸ್ ಐ ಡಿ ಇರಲೇಬೇಕು
❌Visiting Visa holders can’t donate blood.
Emirates I’d is Must

✍️Blood Camp Organizers
Team HUK _ Dubai _ UAE

 

ದುಬೈ ಹೆಮ್ಮೆಯ ಕನ್ನಡಿಗರು ವತಿಯಿಂದ ಡಿಸೆಂಬರ್ 3ಕ್ಕೆ ರಕ್ತದಾನ ಶಿಬಿರ

ಅಬುಧಾಬಿ : 30.12.2020

ಬನ್ನಿ ರಕ್ತ ಸಮಬಂಧಿಗಳಾಗೋಣ ಎಂಬ ಪ್ರಮೇಯದೊಂದಿಗೆ ನೇ ಕನ್ನಡ ರಾಜ್ಯೋತ್ಸವ ಮತ್ತು ನೇ ಯುಎಇ ನ್ಯಾಷನಲ್ ಡೇ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಇದೆ ಬರುವ ಡಿಸೆಂಬರ್ 3ಕ್ಕೆ ದುಬೈ ಹೆಲ್ತ್ ಕೇರ್ ಸಿಟಿಯಲ್ಲಿರುವ ಶೇಕ ಲತೀಫಾ ಆಸ್ಪತ್ರೆಯಲ್ಲಿ ಮದ್ಯಾಹ್ನ 2ರಿಂದ ಸಂಜೆ 8ರ ವರೆಗೆ ರಕ್ತದಾನ ಶಿಬಿರ ನಡೆಯಲಿದೆ,

ರಕ್ತದಾನ ಈ ಲೋಕದಲ್ಲಿ ಎಲ್ಲಾ ದಾನಗಳಿಗಿಂತ ಮಹಾ ದಾನ, ಈ ಪ್ರಸಕ್ತ ಕಾಲಘಟ್ಟದಲ್ಲಿ ಜಾತಿ ಧರ್ಮ ಎಂದು ಮನುಷ್ಯರು ಪರಸ್ಪರ ವೈಮನಸ್ಸಿನಿಂದ ಜೀವಿಸುವಾಗ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದರೆ ರಕ್ತದ ಗುಂಪು ಸಮವಾಗಿದೆಯೇ ಎಂದು ನೋಡುತ್ತಾರೆ ಹೊರತು ಜಾತಿ ಧರ್ಮವನ್ನಲ್ಲ, ಈ ಪ್ರಸಕ್ತ ಕಾಲಘಟ್ಟದಲ್ಲಿ ಮಾನವರ ಮದ್ಯೆ ನಾವೆಲ್ಲಾ ಒಂದೇ ಎಂಬ ಬೆಸುಗೆಯನ್ನು ಸಾರಿ ಹೇಳುದು ಮಾನವ ರಕ್ತ ಮಾತ್ರ, ಅದು ಅಲ್ಲದೆ ಕೋಟ್ಯಂತರ ಅನಿವಾಸಿ ಜನರನ್ನು ಪೋಷಿಸುವ ಈ ಸುಂದರ ಕರ್ಮಭೂಮಿ ಸಂಯುಕ್ತ ಅರಬ್ ಸಂಸ್ಥಾನಕ್ಕೆ ನಮ್ಮ ಒಂದು ಸಣ್ಣ ಮಟ್ಟದ ಋಣ ತೀರಿಸುವ ಒಂದು ಅವಕಾಶವು ಸಹ ಈ ರಕ್ತದಾನ ಆಗಿರುತ್ತೆ,

ತಾವೆಲ್ಲರೂ ಬಂದು ತಮ್ಮವರನ್ನು ಕರೆತಂದು ತಮ್ಮ ಅಮೂಲ್ಯ ರಕ್ತದಾನ ಮಾಡಿ ಈ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮತ್ತು ಈ ಶಿಬಿರವನ್ನು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಕರೆಯಲಾದ ಪತ್ರಿಕಾಘೋಷ್ಠಿಯಲ್ಲಿ ದುಬೈ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಉಪಾಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಮಿತಿ ಸದಸ್ಯರುಗಳಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ ಮತ್ತು ಮೊಯಿನುದ್ದೀನ್ ಹುಬ್ಬಳ್ಳಿ ಹಾಜರಿದ್ದರು.

Comment here

This site uses Akismet to reduce spam. Learn how your comment data is processed.

Next Post

Dubai Dasara 2020

Tue Dec 1 , 2020